ಬುಧವಾರ, ಆಗಸ್ಟ್ 17, 2022
27 °C
ಪ.ಪಂ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶಂಭು ಜೋಳದ್ ಸೂಚನೆ

ವಾರ್ಡ್‌ ಸಮಸ್ಯೆಗಳನ್ನು ಪರಿಹರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಕನೂರು: ‘ಪಟ್ಟಣ ಪಂಚಾಯಿತಿ ವ್ಯಾಪ್ತಿಯ 19 ವಾರ್ಡ್‍ಗಳ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು’ ಎಂದು ಅಧ್ಯಕ್ಷ ಶಂಭು ಜೋಳದ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷೆತೆ ವಹಿಸಿ ಅವರು ಮಾತನಾಡಿದರು.

‘ಈ ಹಿಂದೆ ಆಡಳಿತ ನಡೆಸಿದವರ ಕುರಿತು ನನಗೆ ಹೇಳಬೇಡಿ.
ನಾನು ಬಂದ ಮೇಲೆ ಈಗಾಗಲೇ ಲೈಟ್ ಹಾಕಿಸಿದ್ದೇನೆ. ಕಚೇರಿಗೆ ಬಣ್ಣ ಬಳಿಸಲಾಗಿದೆ. ಹೈಟೆಕ್ ಶೌಚಾಲಯದ ಆವರಣವನ್ನು ಸ್ವಚ್ಚ ಮಾಡಲಾಗಿದೆ. ಪಟ್ಟಣದ ಎಲ್ಲ 19 ವಾರ್ಡ್‍ಗಳ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ತಲಾ ₹1 ಲಕ್ಷದಂತೆ ₹19 ಲಕ್ಷ  ನೀಡಬೇಕು’ ಎಂದು ಹೇಳಿದರು.

ಸಿಬ್ಬಂದಿ ಎಲ್ಲ ವಾರ್ಡ್‍ಗಳಲ್ಲಿ ಚರಂಡಿ ಸ್ವಚ್ಛ ಮಾಡಬೇಕು. ಕಸ ವಿಲೇವಾರಿ ಮಾಡಬೇಕು. ಕೆಲವು ಸಿಬ್ಬಂದಿಗೆ ವೇತನ ನೀಡಿಲ್ಲ. ಎಲ್ಲರಿಗೂ ಈ ತಿಂಗಳು ₹10 ಸಾವಿರ ವೇತನ ನೀಡಬೇಕು. ಜವಳದ ಕಾಲೊನಿಯ ಆಂಜನೇಯ ದೇವಸ್ಥಾನಕ್ಕೆ ದಾಖಲಾತಿ ನೀಡಬೇಕು. ಪಟ್ಟಣದಲ್ಲಿ ಚರಂಡಿ ನಿರ್ಮಿಸಿದ ಗುತ್ತಿಗೆದಾರನಿಗೆ ನೋಟಿಸ್ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಾರಾಟ ಮಳಿಗೆ ನಿರ್ಮಿಸಲು ₹4 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.

ಮುಖ್ಯಾಧಿಕಾರಿ ಶ್ರೀಶೈಲ್‍ಗೌಡ ಸಂಕನಗೌಡ, ಉಪಾಧ್ಯಕ್ಷೆ ಗೀತಾ ಜಂಗ್ಲಿ, ಹನುಮಯ್ಯ ಹಂಪನಾಳ, ಮೃತ್ಯುಂಜಯ್ಯ ಕಂಪ್ಲಿ, ಮಹೇಶ ಕವಲೂರು, ಕನಕಪ್ಪ ಬ್ಯಾಡರ್, ಬಸವರಾಜ ಅಡವಿ, ಸಿರಾಜ್ ಕರಮುಡಿ, ರೇಹಮಾನಸಾಬ ಮಕ್ಕಪ್ಪನವರ್, ರತ್ನವ್ವ ಪಲ್ಲೆದ್, ವಿಜಯಲಕ್ಷ್ಮಿ ಬಿನ್ನಾಳ, ಎಮ್ ನೋಟಗಾರ, ನಾಗಮ್ಮ ಗಡ್ಡದವರ್, ನೇತ್ರಾವತಿ ಬಂಡಿ, ಯಲ್ಲಪ್ಪ ಕಲ್ಮನಿ ಹಾಗೂ ಶಾಂತಲಾ ಬಂಕದಮನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.