ಭಾನುವಾರ, ಜೂನ್ 13, 2021
29 °C

ಕೋತಿಗಳಿಗೆ ಆಹಾರ ನೀಡಿದ ತಹಶೀಲ್ದಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಆನೆಗೊಂದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಕೋತಿಗಳಿಗೆ ಕಂದಾಯ ಇಲಾಖೆ ಸಿಬ್ಬಂದಿ ಬುಧವಾರ ಆಹಾರ ನೀಡಿದರು.

ಸಾಮಾನ್ಯ ದಿನಗಳಲ್ಲಿ ಕೋತಿಗಳು ಇಲ್ಲಿಗೆ ಬರುವ ಪ್ರವಾಸಿಗರು ನೀಡುವ ಆಹಾರ ತಿನ್ನುತ್ತಿದ್ದವು. ಲಾಕ್‌ಡೌನ್‌ ಕಾರಣ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಹಾಗಾಗಿ ಪರದಾಡುತ್ತಿದ್ದವು. ತಹಶೀಲ್ದಾರ್ ನಾಗರಾಜ ನೇತೃತ್ವದ ತಂಡ ಆನೆಗೊಂದಿ ಸಮೀಪದ ಪಂಪಾ ಸರೋವರ ಹಾಗೂ ಅಂಜನಾದ್ರಿ ಪರ್ವತ ಸಮೀಪ ಇದ್ದ ಕೋತಿಗಳಿಗೆ ಬಾಳೆಹಣ್ಣು, ಶೇಂಗಾ ಬೀಜ ನೀಡಿತು.

ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ಶರಣಪ್ಪ ಹಾಗೂ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.