ಗಂಗಾವತಿ: ‘ಪುರಾತನ ಕಾಲದಿಂದಲೂ ಭಾರತ ಹಿಂದೂ ಸಂಸ್ಕೃತಿಯ ತಳಹದಿಯ ಮೇಲೆ ನಿಂತಿದೆ. ಆದರೆ ಹಿಂದೂಗಳಲ್ಲಿನ ಒಗ್ಗಟ್ಟಿನ ಕೊರತೆಯಿಂದ ಸಮಾಜ ವಿಘಟವಾಗುತ್ತಿದೆ. ಇದರಿಂದ ಬಲಿಷ್ಠ ಭಾರತದ ಮೇಲೆ ದಾಳಿ ನಡೆಸಲು ಬೇರೆಯವರು ಯತ್ನಿಸುತ್ತಿದ್ದಾರೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಳ್ಳಾರಿ ವಿಭಾಗದ ವ್ಯವಸ್ಥಾ ಪ್ರಮುಖ ರಾಯಚೂರಿನ ಎ.ನಾಗರಾಜ ಹೇಳಿದರು.

ನಗರದ ಹಿಂದೂ ಸಮ್ಮೇಳನ ಸಮಿತಿ ನೇತೃತ್ವದಲ್ಲಿ ಪೂರ್ವಭಾಗದ ಸಮಿತಿಯ ಸಹಯೋಗದಲ್ಲಿ ಹಿರೇಜಂತಕಲ್ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಮುಂದುಗಡೆ ಭಾನುವಾರ ಆಯೋಜಿಸಿದ್ದ ಹಿಂದೂ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು ‘ಭಾರತದ ಪ್ರತಿಯೊಬ್ಬ ಪ್ರಜೆ ತನ್ನ ಮೂಲ ಅರಿತುಕೊಂಡು ಜಾಗೃತಿಯಾಗಬೇಕು. ಸಮಸ್ತ ಹಿಂದೂಗಳು ಒಗ್ಗಟ್ಟಾಗಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂಬ ಉದ್ದೇಶದಿಂದ ಹಿಂದೂ ಸಮ್ಮೇಳನ ನಡೆಸಲಾಗುತ್ತಿದೆ’ ಎಂದರು.

‘ಸಂಘ ಪ್ರತಿಬಾರಿಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಬಂದಿದೆ. ಈಗ ಮತ್ತೊಮ್ಮೆ ಹಿಂದೂ ಸಮಾಜವನ್ನು ಜಾಗೃತಿಗೊಳಿಸಲು ವಾರ್ಡ್ಗಳಲ್ಲಿ ಸಮ್ಮೇಳನ ನಡೆಸಲಾಗುತ್ತಿದೆ. ಸಮಾಜವೇ ನೇತೃತ್ವವಹಿಸಿ ಸಮ್ಮೇಳನ ನಡೆಸುತ್ತಿವೆ. ಈ ಸಮ್ಮೇಳನದ ಮೂಲಕ ಸಮಾಜ ಜಾಗೃತಿಯಾಗಬೇಕು. ಮನೆ ಮನೆಯಲ್ಲಿ ಪರಿಸರ ಅರಿವು, ಸಾಮರಸ್ಯ, ಕುಟುಂಬ ಪದ್ಧತಿ, ಸ್ವದೇಶಿ ಆಚರಣೆ, ನಾಗರೀಕ ಶಿಷ್ಟಾಚಾರದ ಜಾಗೃತಿ ಮೂಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಸಮ್ಮೇಳನ ಸಮಿತಿ ನಗರ ಸಂಯೋಜಕ ಅಮರೇಶ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ ‘ಹಿಂದೂ ಸಮಾಜ ನಮ್ಮತವನ್ನು ಅರಿತುಕೊಳ್ಳಬೇಕು. ಎಲ್ಲರು ಒಂದಾಗಿ ಕೆಲಸ ಮಾಡಬೇಕು ಎಂಬ ಕಾರಣದಿಂದ ಈ ಸಮ್ಮೇಳನ ನಡೆಸಲಾಗುತ್ತಿದೆ’ ಎಂದರು.

ಪ್ರಾರಂಭದಲ್ಲಿ ಮಕ್ಕಳಿಂದ ಭರತ ನಾಟ್ಯ, ತಾಯಂದಿರಿಗ ಉಡಿ ತುಂಬುವುದು ಮತ್ತು ಪಾದಪೂಜೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಹಿಂದೂ ಸಮ್ಮೇಳನ ಸಮಿತಿ ನಗರ ಸಂಯೋಜಕ ಅಮರೇಶ ಪಾಟೀಲ್, ಸಾನ್ನಿಧ್ಯ ವಹಿಸಿದ್ದ ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಸಮ್ಮೇಳನ ಸಮಿತಿ ಭಾಗದ ಅಧ್ಯಕ್ಷ ಜೆ.ನಾಗರಾಜ, ನಗರಸಭೆ ಮಾಜಿ ಸದಸ್ಯ ಈ.ಪರಮೇಶ, ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ಬಿಜೆಪಿ ಮುಖಂಡ ಎಚ್.ಗಿರೇಗೌಡ, ತಿಪ್ಪೇರುದ್ರಸ್ವಾಮಿ, ರಾಘವೇಂದ್ರಶೆಟ್ಟಿ, ವಿರೇಶ ಬಲಕುಂದಿ, ಸಿದ್ಧರಾಮಸ್ವಾಮಿ, ಮನೋಹರಗೌಡ ಹೇರೂರು, ಶಿವಕುಮಾರ ಅರಿಕೇರಿ, ಚಂದ್ರು ಹಿರೂರು, ನೀಲಕಂಠಪ್ಪ ನಾಗಶೆಟ್ಟಿ, ಯಮನೂರ ಚೌಡ್ಕಿ, ಅಯ್ಯನಗೌಡ ಹೇರೂರು, ಸಮಿತಿ ಪ್ರಮುಖ ಚಂದ್ರು ಹಿರೇಮಠ, ರವಿ ಹಿರೇಜಂತಕಲ್, ಜಡಿಯಪ್ಪ, ಕಾರ್ತಿಕ, ಅಕ್ಷಯ ತಂಜಾವೂರು, ರವಿ ಹಿರೇಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.