ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುರಕ್ಷಿತ ಹೆರಿಗೆ ಜಾಗೃತಿಯೇ ಮಾತೃತ್ವ ಅಭಿಯಾನ’

Published 10 ಜನವರಿ 2024, 8:39 IST
Last Updated 10 ಜನವರಿ 2024, 8:39 IST
ಅಕ್ಷರ ಗಾತ್ರ

ಯಲಬುರ್ಗಾ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸುರಕ್ಷಿತ ಹೆರಿಗೆ ಪ್ರಕ್ರಿಯೆ ಕೈಗೊಳ್ಳುವ ಉದ್ದೇಶದಿಂದ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಕಾರ್ಯಕ್ರಮ ಹಾಗೂ ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ವೈದ್ಯಾಧಿಕಾರಿ ಡಾ.ಕೃಷ್ಣ ಹೊಟ್ಟಿ ಮಾತನಾಡಿ, ಹೆರಿಗೆ ಸಂದರ್ಭದಲ್ಲಿ ಮರಣ ಪ್ರಮಾಣವನ್ನು ಕಡಿಮೆಗೊಳಿಸುವುದು ಹಾಗೂ ಮಕ್ಕಳ ಜನನ ಪ್ರಮಾಣ ಹೆಚ್ಚಿಸುವುದು ಸೇರಿ ಹೆರಿಗೆಗೆ ಸಂಬಂಧಿಸಿದ ಸುರಕ್ಷತೆ ಬಗ್ಗೆ ಆರೋಗ್ಯ ಇಲಾಖೆಯ ಮೂಲಕ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಈ ಆಂದೋಲನ ಹಮ್ಮಿಕೊಂಡಿದೆ ಎಂದರು.

ಗರ್ಭಿಣಿಯರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಡುವುದರಿಂದ ಹೆರಿಗೆ ಸಂದರ್ಭದಲ್ಲಿ ಗರ್ಭಿಣಿಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಹಾಗೆಯೇ ಮಗು ಕೂಡಾ ಆರೋಗ್ಯಯುಕ್ತವಾಗಿ ಜನಿಸುತ್ತದೆ. ಹಾಗೆಯೇ ಸದೃಢವಾಗಿಯೂ ಬೆಳೆಯುತ್ತದೆ. ಗರ್ಭಿಣಿಯು ಎಚ್ಐವಿ ಸಿಪಿಲಿಸ್ ಹಾಗೂ ಹೆಪಾಟಿಟಿಸ್ ಹರಡುವ ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು.

ಎಲ್ಲಾ ಗರ್ಭಿಣಿಯರು ರಕ್ತ ಪರೀಕ್ಷೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಿಸಿಕೊಳ್ಳಬೇಕು. ಒಂದು ವೇಳೆ ಯಾರಿಗಾದರೂ ಕಾಯಿಲೆ ಇದ್ದರೆ ಅಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ ಎಂದು ಸ್ತ್ರೀರೋಗ ತಜ್ಞ ಮಹಾಂತೇಶ ಹೇಳಿದರು.

ಮಕ್ಕಳು ತಜ್ಞರಾದ ಡಾ.ಮೀನಾ ಗರ್ಭಿಣಿಯರಿಗೆ ಸೋಂಕು ಬರದಂತೆ ಮುಂಜಾಗ್ರತೆ ವಹಿಸಿ ಅರೋಗ್ಯವಂತ ಮಕ್ಕಳನ್ನು ಪಡೆಯಿರಿ ಎಂದರು.

ಇದೇ ವೇಳೆ 40 ಗರ್ಭಿಣಿಯರಿಗೆ ಉಡಿ ತುಂಬಲಾಯಿತು. ಎಲ್ಲಾ ಗರ್ಭಿಣಿಯರಿಗೆ ರಕ್ತ ಪರೀಕ್ಷೆ ಹಾಗೂ ಎಚ್‍ಐವಿ ಪರೀಕ್ಷೆ ಕೈಗೊಳ್ಳಲಾಯಿತು.  ಆಪ್ತಸಮಾಲೋಚಕ ಕಾಳಪ್ಪ ಬಡಿಗೇರ್, ಚಂದ್ರಶೇಖರ್ ನಾಯಕ್, ಹದಿಹರೆಯದ ಅರೋಗ್ಯ ಆಪ್ತಸಮಾಲೋಚಕ ಶರಣಪ್ಪ ಉಪ್ಪಾರ್, ತಾಲ್ಲೂಕು ಆಶಾ ಮೇಲ್ವಿಚಾಕಿ ಮಂಜುಳಾ ಛಲವಾದಿ, ಕಿರಿಯ ಅರೋಗ್ಯ ಸುರಕ್ಷತಾ ಅಧಿಕಾರಿ, ಶ್ರೀದೇವಿ ರೆಡ್ಡರ, ಶಿಲ್ಪಾ ಭಜಂತ್ರಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT