ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಲಾಲರ ಆದರ್ಶ ಅಳವಡಿಸಿಕೊಳ್ಳಿ: ಪರಣ್ಣ ಮುನವಳ್ಳಿ ಸಲಹೆ

ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪರಣ್ಣ ಮುನವಳ್ಳಿ ಸಲಹೆ
Last Updated 15 ಫೆಬ್ರುವರಿ 2021, 12:56 IST
ಅಕ್ಷರ ಗಾತ್ರ

ಗಂಗಾವತಿ: ನಗರದ ವಿರುಪಾಪುರ ತಾಂಡಾದಲ್ಲಿ ಬಂಜಾರ ಸಮಾಜದಿಂದ ಸೋಮವಾರ ಸಂತ ಸೇವಾಲಾಲರ 282ನೇ ಜಯಂತಿ ಆಚರಿಸಲಾಯಿತು.

ಸಂತ ಸೇವಾಲಾಲ್‌ ಮಹಾರಾಜರ ಭಾವಚಿತ್ರಕ್ಕೆ ಶಾಸಕ ಪರಣ್ಣ ಮುನವಳ್ಳಿ ಪುಷ್ಪಾರ್ಚನೆ ಮಾಡಿದರು.

ಬಳಿಕ ಮಾತನಾಡಿ,‘ಸೇವಾಲಾಲರ ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ನಿರಂತರವಾಗಿ ಅವರನ್ನು ಸ್ಮರಿಸಬೇಕು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು’ ಎಂದರು.

ಬಿಜೆಪಿ ಯುವ ಮುಖಂಡ ಜಿ.ಶ್ರೀಧರ್, ಗೋರ ಸೇನಾ ರಾಜ್ಯ ಘಟಕದ ಉಪಾಧ್ಯಕ್ಷ ಶಿವಪ್ಪ ಜಾಗಗೋರ್, ಶಂಕರ್ ನಾಯ್ಕ್‌, ಸುಳೇಕಲ್ ವೀರೇಶ, ಹನಮಂತ ಜಾಧವ, ಪಾಂಡು ನಾಯ್ಕ್‌, ಲೋಕೇಶ, ರವಿಚಂದ್ರ, ಕೃಷ್ಣ ನಾಯ್ಕ್‌, ಸಂತೋಷ, ಶಶಿಕುಮಾರ್ ಹಾಗೂ ಮಂಜುನಾಥ ಇದ್ದರು.

ತಾಲ್ಲೂಕು ಆಡಳಿತದಿಂದ ಆಚರಣೆ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಸಂತ ಸೇವಾಲಾಲ್‌ ಜಯಂತಿ ಆಚರಿಸಲಾಯಿತು.

ಶಿರಸ್ತೇದಾರ್ ವಿ.ಎಚ್.ಹೊರಪೇಟೆ ಮಾತನಾಡಿ,‘ಸಂತರು, ಶರಣರು ನಡೆದಾಡಿದ ಭಾರತ ದೇಶ ಸಂಸ್ಕಾರದ ಕಾರಣಕ್ಕೆ ಜಗತ್ತಿಗೆ ಹೆಸರು ವಾಸಿವಾಗಿದೆ. ಅಂಥ ಮಹಾನ್ ವ್ಯಕ್ತಿಗಳ ಜಯಂತಿಯನ್ನು ನಾವುಗಳು ಕೇವಲ ಆಚರಣೆಗೆ ಮಾತ್ರ ಸಿಮೀತ ಮಾಡಬಾರದು’ ಎಂದು ಹೇಳಿದರು.

ಸಂತ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT