ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿಯಲ್ಲಿ ಹಿಂದೂ–ಮುಸ್ಲಿಂ ನಡುವೆ ವಾಗ್ವಾದ: ನಿಷೇಧಾಜ್ಞೆ ಜಾರಿ

Last Updated 2 ಜೂನ್ 2022, 8:39 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಲಕ್ಷ್ಮಿ ಕ್ಯಾಂಪ್‌ನಲ್ಲಿ ನಗರಸಭೆ ಕಾಯ್ದಿರಿಸಿದ ಉದ್ಯಾನದ ಜಾಗದಲ್ಲಿ ಬುಧವಾರ ಮುಸ್ಲಿಮರು ಶೆಡ್‌ ನಿರ್ಮಿಸಿ ಪ್ರಾರ್ಥಿಸುತ್ತಿದ್ದಾರೆ ಎಂದು ಹಿಂದೂ ಸಮುದಾಯದವರು ಆಕ್ಷೇಪಿಸಿದ ಕಾರಣ ಎರಡೂ ಸಮುದಾಯದವರ ನಡುವೆ ವಾಗ್ವಾದ ನಡೆಯಿತು. ಇದರಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಘಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತ ಆರ್. ವಿರೂಪಾಕ್ಷ ಮೂರ್ತಿ ಭೇಟಿ ನೀಡಿದರು. ಎರಡೂ ಗುಂಪಿನವರನ್ನು ಸಮಾಧಾನಪಡಿಸಿದ ಪೊಲೀಸರು ಸ್ಥಳದ ದಾಖಲೆಗಳನ್ನು ನಗರಸಭೆಗೆ ಸಲ್ಲಿಸಲು ಸೂಚಿಸಿದರು. ಜೂನ್ 3ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಎರಡೂ ಗುಂಪಿನವರ ದಾಖಲೆಗಳ ಪರಿಶೀಲಿಸಲಾಗಿದ್ದು, ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದ ಈ ಸ್ಥಳ ಹಿಂದೆ ನಗರಸಭೆ ಕಾಯ್ದಿರಿಸಿದ್ದ ಉದ್ಯಾನ ಎಂಬುದು ತಿಳಿದುಬಂದಿದೆ.

‘ಕೆಲ ದಿನಗಳ ಹಿಂದೆ ಆ ಸ್ಥಳವನ್ನು ಆರು ನಿವೇಶನಗಳನ್ನಾಗಿ ವಿಂಗಡಿಸಿಕೊಂಡು ಕೆಲವರು ಆಶ್ರಯ ಪಡೆದಿದ್ದರು. ಅದರಲ್ಲಿ ಒಂದು ನಿವೇಶನವನ್ನು ದಾನದ ರೂಪದಲ್ಲಿ ಮುಸ್ಲಿಮರಿಗೆ ನೀಡಲಾಗಿದೆ ಎಂದು ಆ ಸಮುದಾಯದವರು ವಾದಿಸುತ್ತಿದ್ದಾರೆ. ಆದರೆ, ದಾಖ ಲೆಗಳನ್ನು ಪರಿಶೀಲಿಸಿದಾಗ, ಇದು ಮುಸ್ಲಿಂ ಸಮುದಾಯಕ್ಕೆ ವರ್ಗಾವಣೆಯಾಗಿಲ್ಲ. ನಗರಸಭೆಯ ಸುಪರ್ದಿಯಲ್ಲೇ ಇದೆ’ ಎಂದು ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT