ಹನುಮಸಾಗರ: ‘ವಿದ್ಯಾರ್ಥಿಗಳು ಸಂಶೋಧನಾತ್ಮಕ ಗುಣ ಬೆಳೆಸಿಕೊಂಡರೆ ಕೈಗಾರಿಕಾ ಕ್ಷೇತ್ರದಲ್ಲಿ, ಉದ್ದಿಮೆಗಳಲ್ಲಿ ಉದ್ಯೋಗ ಪಡೆಯಬಹುದು ಅಥವಾ ಸ್ವಂತ ಉದ್ದಿಮೆದಾರರಾಗಬಹುದು’ ಎಂದು ಪ್ರಭಾರ ಪ್ರಾಚಾರ್ಯ ವಿ.ಎಮ್.ಕಾಳಗಿ ಹೇಳಿದರು.

ಸಮೀಪದ ಮನ್ನೇರಾಳ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಿರ್ಲೋಸ್ಕರ್ ಕಂಪನಿಯಿಂದ ಹಮ್ಮಿಕೊಳ್ಳಲಾಗಿದ್ದ ಎ.ಟಿ.ಎಸ್ ತರಬೇತಿಗಾಗಿ ಅಭ್ಯರ್ಥಿಗಳ ಆಯ್ಕೆ ಶಿಬಿರದಲ್ಲಿ ಅವರು ಮಾತನಾಡಿದರು.

ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದ ಮೂಲಕ ಐ.ಟಿ.ಐ. ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಎ.ಟಿ.ಎಸ್ ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಯಿತು.

ಸಂದರ್ಶನದಲ್ಲಿ 150ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.

ಕಿರ್ಲೋಸ್ಕರ್ ಕಂಪನಿಯ ಅಧಿಕಾರಿಗಳಾದ ಮೇಘರಾಜ, ಹರೀಶ ಹಾಗೂ ರವಿ ಅವರು ಸಂದರ್ಶನ ಹಾಗೂ ಲಿಖಿತ ಪರೀಕ್ಷೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡರು.

ಕಿರಿಯ ತರಬೇತಿ ಅಧಿಕಾರಿಗಳಾದ ರಾಠೋಡ ದಿಲೀಪ್ ಖೇಮು, ಅತಿಥಿ ಉಪನ್ಯಾಸಕರಾದ ಝಡ್.ಎಮ್.ಮುಲ್ಲಾ, ವಿಜಯಮಾಹಾಂತೇಶ ಹಾಗೂ ಕರೀಮಸಾಬ ಬಳೂಟಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.