ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಗಿರಿ ಸಂಘ: ಕೆರಿ ಅಧ್ಯಕ್ಷ, ಯಲಬುರ್ಗಿ ಉಪಾಧ್ಯಕ್ಷ

Published 2 ಜುಲೈ 2024, 14:41 IST
Last Updated 2 ಜುಲೈ 2024, 14:41 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ಶಿವಗಿರಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯಂಕಾರೆಡ್ಡಿ ಕೆರಿ, ಉಪಾಧ್ಯಕ್ಷರಾಗಿ ರಾಘವೇಂದ್ರ ಯಲಬುರ್ಗಿ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸುಪ್ರಿಯಾ ಬಿಡಿಕರ್  ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ವೆಂಕಾರೆಡ್ಡಿ ಕೆರಿ ಹಾಗೂ ರಾಘವೇಂದ್ರ ಯಲಬುರ್ಗಿ ಅವರು ಮಾತನಾಡಿ, ‘ಸಮಾನ ಮನಸ್ಕರು ಸೇರಿ ಸಹಕಾರಿ ಸಂಘ ರಚಿಸಿಕೊಂಡಿದ್ದು ಬಡವರು ಹಾಗೂ ದುರ್ಬಲ ವರ್ಗದವರು ಆರ್ಥಿಕವಾಗಿ ಸಬಲರಾಗಲು ಸಹಕಾರ‌ ನೀಡಲಾಗುವುದು. ಸಾಲ ಪಡೆಯುವವರು, ಶೇರುದಾರರೇ ಸಂಘದ ಜೀವಾಳವಾಗಿದ್ದು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡಬೇಕು. ಸಂಘದಲ್ಲಿ ಪಕ್ಷ ರಾಜಕಾರಣ, ಸ್ವ‌ಜನ ಪಕ್ಷಪಾತ ಬಾರದಂತೆ ನೋಡಿಕೊಳ್ಳಲಾಗುವುದು, ಪ್ರತಿಯೊಬ್ಬರ ಸಹಕಾರ ಮುಖ್ಯ’ ಎಂದರು.

ನಿರ್ದೇಶಕರಾದ ಶಿವಕುಮಾರ ಕೋರಿ, ಸತೀಶ ಆಸಾಪುರ, ಮಂಜುನಾಥ ಹೊಸಳ್ಳಿ, ನಾಗೇಂದ್ರ ನಾಯಕ, ವೀರೇಶ ಹಾದಿಮನಿ, ನಿಂಗಪ್ಪ ಮ್ಯಾಗಡೆ, ರಾಘವೇಂದ್ರ ಮರಾಠಿ, ಗಣೇಶ ಕಾರಪುಡಿ, ಮಹೇಶ ಹಾದಿಮನಿ
ಪ್ರಮುಖರಾದ ಮಂಜುನಾಥ ರೆಡ್ಡಿ ಮಾದಿನಾಳ, ವಿನಾಯಕ ಭಾವಿಕಟ್ಟಿ ಉಪಸ್ಥಿತರಿದ್ದರು.

ನಾಳೆ ಉದ್ಘಾಟನೆ: ನವಲಿ ರಸ್ತೆಯಲ್ಲಿರುವ ಶಿವಗಿರಿ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನೆ 3ರಂದು ನಡೆಯಲಿದೆ. ಬೆಳಿಗ್ಗೆ 10ಗಂಟೆಗೆ ವಿರಕ್ತಮಠದ ಚನ್ನಮಲ್ಲಸ್ವಾಮಿ ಹಾಗೂ ನಾಗನಕಲ್ ಶರಣಯ್ಯಸ್ವಾಮಿ ಅವರು ಉದ್ಘಾಟಿಸುವರು. ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಂಘದ ಜಿಲ್ಲಾ ನಿರ್ದೇಶಕ ಶ್ರೀಧರ ಗದ್ದಡಕಿ, ಸಹಕಾರಿ ಸಂಘದ‌ ಜಿಲ್ಲಾ ಉಪ‌ ನಿಬಂಧಕ ದಸ್ತಗೀರ ಅಲಿ, ಆರ್‌ಡಿಸಿಸಿ ಬ್ಯಾಂಕ್ ‌ನಿರ್ದೇಶಕ ಶರಣಪ್ಪ ಹ್ಯಾಟಿ, ಜಿಲ್ಲಾ ಸೌಹಾರ್ದ ಸಹಕಾರಿ ಸಂಯೋಜಕ ಓಂಕಾರ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT