ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜಕ್ಕೂ ಕೊಡುಗೆ ನೀಡಬೇಕು: ಸಂಗಣ್ಣ

ಹೇಮರಡ್ಡಿ ಮಲ್ಲಮ್ಮ ದೇವಾಲಯದಲ್ಲಿ ಶಿವರಾತ್ರಿ ಆಚರಣೆ
Published 10 ಮಾರ್ಚ್ 2024, 4:16 IST
Last Updated 10 ಮಾರ್ಚ್ 2024, 4:16 IST
ಅಕ್ಷರ ಗಾತ್ರ

ಕೊಪ್ಪಳ: ‘ಸಮಾಜ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎನ್ನುವ ಪ್ರಶ್ನೆಯೂ ಮುಖ್ಯವಾದದ್ದು’ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. 

ನಗರದ ಕಿನ್ನಾಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ದೇವಾಲಯದಲ್ಲಿ ರಡ್ಡಿ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಮಹಾಶಿವರಾತ್ರಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ರಡ್ಡಿ ಸಮುದಾಯದಿಂದ ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕೊಪ್ಪಳದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣದಲ್ಲಿ ಹೆಬ್ಬಾಳ ಶಿವಪ್ಪ ಅವರ ಶ್ರಮ ಸಾಕಷ್ಟಿದೆ. ಅವರನ್ನು ಸ್ಮರಿಸಲೇಬೇಕು’ ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ,‘ಭಕ್ತರಿಗೆ ಉಪವಾಸ ವ್ರತ ಆಚರಣೆಗೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಕಮಿಟಿ ಅನುಕೂಲ ಮಾಡಿಕೊಡುವ ಮೂಲಕ ಸಾಮಾಜಿಕ ಕೆಲಸಕ್ಕೆ ಹೆಸರಾಗಿದೆ. ಇದೊಂದು ಶ್ರಮಿಕ ಸಮಾಜ’ ಎಂದರು.

ಜೀವನಸಾಬ್ ಬಿನ್ನಾಳ ಜನಪದ ಗಾಯನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್, ರಡ್ಡಿ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶಪ್ಪ ಸಿಂಗನಾಳ, ಪ್ರಮುಖರಾದ ಎಸ್.ಬಿ.ನಾಗರಳ್ಳಿ, ಆರ್.ಪಿ.ರಡ್ಡಿ, ಕಾಶಿನಾಥ ರಡ್ಡಿ ಅವಾಜಿ, ಪ್ರಭು ಹೆಬ್ಬಾಳ, ಬಸವರಾಜ ಪುರದ, ವಿರೂಪಣ್ಣ ನವೋದಯ, ಸೈಯದ್ ಜುಲ್ಲು ಖಾದ್ರಿ, ವೆಂಕಾರೆಡ್ಡಿ ವಕೀಲರು, ಕೃಷ್ಣಾರಡ್ಡಿ ಗಲಬಿ, ತಿಮ್ಮಾರಡ್ಡಿ ಕರಡ್ಡಿ, ಹನುಮರಡ್ಡಿ ಹಂಗನಕಟ್ಟಿ, ಡಾ. ಶ್ರೀನಿವಾಸ ಹ್ಯಾಟಿ, ಡಾ. ಸಿ.ಎಸ್. ಕರಮುಡಿ, ಪತ್ರಕರ್ತ ಸೋಮರಡ್ಡಿ ಅಳವಂಡಿ, ರವೀಂದ್ರರಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸಮುದಾಯದ ಅನೇಕ ನಾಯಕರು ದೇವಾಲಯ ನಿರ್ಮಾಣ ಹಾಗೂ ಧಾರ್ಮಿಕ ಚಟುವಟಿಕೆ ಆಯೋಜನೆಯಲ್ಲಿ ಶ್ರಮಿಸಿದ್ದಾರೆ.

-ಸಿ.ವಿ.ಚಂದ್ರಶೇಖರ ಜೆಡಿಎಸ್‌ ಕೋರ್‌ ಕಮಿಟಿ ರಾಜ್ಯ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT