‘ಸಿದ್ಧೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ’

ಪ್ರಜಾವಾಣಿ ವಾರ್ತೆ
ಕಾರಟಗಿ: ಪಟ್ಟಣದ ಶರಣ ಬಸವೇಶ್ವರ ಕನ್ನಡ, ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿದ್ಧೇಶ್ವರ ಶ್ರೀಗಳ ನಿಧನಕ್ಕೆ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೌನ ಆಚರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಮುಖ್ಯಗುರು ಅಮರೇಶ ಪಾಟೀಲ, ಶಿಕ್ಷಕ ಜಗದೀಶ ಭಜಂತ್ರಿ ಮಾತನಾಡಿ, ಸಿದ್ಧೇಶ್ವರ ಮಹಾನ ಸಂತ, ಜ್ಞಾನ ಭಂಡಾರ ಆಗಿದ್ದರು. ಅವರ ಜೀವನ ಶೈಲಿ, ಸರಳತೆ, ಪ್ರಾಮಾಣಿಕತೆ, ಪ್ರಬುದ್ಧತೆ ಎಲ್ಲರನ್ನೂ ಆಕರ್ಷಿಸಿತ್ತು ಎಂದರು.
ಶಿಕ್ಷಕ ಮೆಹಬೂಬ ಕಿಲ್ಲೆದಾರ ಶ್ರೀಗಳ ಕುರಿತು ಹಾಡು ಹಾಡಿದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಜಗದೀಶ ಅವರಾದಿ, ನಿರ್ದೇಶಕ ಮಲ್ಲಿಕಾರ್ಜುನ ಹಿಂದಪುರ, ಮುಖ್ಯಗುರು ವೀರೇಶ ಮ್ಯಾಗೇರಿ, ಮಹಾಂತೇಶ ಗದ್ದಿ, ಮಧುಮತಿ ಶಿಕ್ಷಕ ಗಿರೀಶ, ಲಿಂಗರಾಜ, ರವೀಂದ್ರ ಭಟ್, ದೇವರಾಜ ಅಡಕಿ, ದೇವೇಂದ್ರಪ್ಪ, ಪಂಪಾಪತಿ, ಮಲ್ಲಿಕಾರ್ಜುನ, ಗುಂಡಪ್ಪ ಅರಳಿ, ಮಹಮ್ಮದ ಇಬ್ರಾಹಿಂ, ಸಿಬ್ಬಂದಿ ಇದ್ದರು.
ಸಿದ್ದಾಪುರ: ತಾಲ್ಲೂಕಿನ ಸಿದ್ದಾಪುರ ಗ್ರಾ.ಪಂ. ಕಚೇರಿಯಲ್ಲಿ ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಶ್ರದ್ಧಾಶಂಜಲಿ ಸಲ್ಲಿಸಲಾಯಿತು. ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಸಿಬ್ಬಂದಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.