ಕೊಪ್ಪಳ: ನಗರದ ದಿವಟರ ಓಣಿಯಲ್ಲಿ ವಾಸವಾಗಿದ್ದ ಸೈಯದ್ ಸಫ್ದರ್ ಅಲಿ (65) ಹಾಗೂ ಮೆಹಬೂಬ್ ನಗರದಲ್ಲಿ ವಾಸವಿದ್ದ ಶಾಹೇದ್ ಬೇಗಂ (75) ಒಂದೇ ದಿನ ಮೃತಪಟ್ಟಿದ್ದಾರೆ. ಇವರಿಬ್ಬರೂ ಅಕ್ಕ, ತಮ್ಮ.
ತಮ್ಮ ಸಮುದಾಯದ ಮಕ್ಕಳಿಗೆ ಶಾಹೇದ್ ಅವರು ಅರಬ್ಬಿ ಕಲಿಸುತ್ತಿದ್ದರಿಂದ ಮಕ್ಕಳು ಅವರನ್ನು ಟೀಚರ್ ಎಂದು ಕರೆಯುತ್ತಿದ್ದರು. ಇದೇ ಹೆಸರಿನಿಂದಲೇ ಅವರನ್ನು ಗುರುತಿಸಲಾಗುತ್ತಿತ್ತು. ಶಾಹೇದ್ ಶುಕ್ರವಾರ ಸಂಜೆ ಮೃತಪಟ್ಟರೆ, ಸಫ್ದರ್ ಅಲಿ ಮಧ್ಯರಾತ್ರಿ ನಿಧನರಾಗಿದ್ದಾರೆ. ಇಬ್ಬರ ಅಂತ್ಯಸಂಸ್ಕಾರವನ್ನು ಶನಿವಾರ ಬೆಳಿಗ್ಗೆ 11 ಗಂಟೆಗೆ ಏಕಕಾಲಕ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.