ಹಾಂಗ್‌ಝೌ (ಪಿಟಿಐ): ಒಲಿಂಪಿಯನ್ ಈಜುಪಟು, ಕರ್ನಾಟಕದ ಶ್ರೀಹರಿ ನಟರಾಜ್ ಭಾನುವಾರ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿದರು.

ಭಾರತದ ಮಹಿಳಾ ತಂಡವು 4X100 ಮೀ. ಫ್ರೀಸ್ಟೈಲ್ ರಿಲೆಯಲ್ಲಿ ಫೈನಲ್ ಪ್ರವೇಶಿಸಿತು.

ಬೆಂಗಳೂರಿನ ಶ್ರೀಹರಿ 100 ಮೀ. ಬ್ಯಾಕ್‌ಸ್ಟ್ರೋಕ್ ಹೀಟ್ಸ್‌ನಲ್ಲಿ 54.71 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಪಡೆದರು. ಒಟ್ಟಾರೆ ಅರ್ಹತಾ ಸುತ್ತುಗಳಲ್ಲಿ ಐದನೇಯವರಾದರು. ಇದರೊಂದಿಗೆ ಅಂತಿಮ ಸುತ್ತಿಗೆ ಸಾಗಿದರು.

ಭಾರತದ ಉತ್ಕರ್ಷ್ ಸಂತೋಷ ಪಾಟೀಲ ಇದೇ ವಿಭಾಗದಲ್ಲಿ 20ನೇ ಸ್ಥಾನ ಪಡೆದರು. 100 ಮೀ ಫ್ರೀಸ್ಟೈಲ್‌ನಲ್ಲಿ ತನಿಷ್ ಜಾರ್ಜ್ ಮ್ಯಾಥ್ಯೂ ಮತ್ತು ಅನಿಲ್ ಕುಮಾರ್ ಶೈಲಜಾ ಅವರು ಫೈನಲ್ ತಲುಪುವಲ್ಲಿ ವಿಫಲರಾದರು.

ಮಹಿಳೆಯರ ವಿಭಾಗದಲ್ಲಿ ಒಲಿಂಪಿಯನ್ ಮಾನಾ ಪಾಟೀಲ, ದಿನಿಧಿ ದೇಸಿಂಗು, ಜಾನ್ವಿ ಚೌಧರಿ ಮತ್ತು ಶಿವಾಂಗಿ ಶರ್ಮಾ ಅವರು 4X100 ಮೀ. ಫ್ರೀಸ್ಟೈಲ್ ರಿಲೆಯಲ್ಲಿ 3ನಿ,53.80ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆರನೇ ಸ್ಥಾನದೊಂದಿಗೆ ಫೈನಲ್‌ಗೆ ಸಾಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.