ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ನಿರಂತರ ಶ್ರಮದಿಂದ ಜಿಲ್ಲೆಗೆ ‘ಎ’ ಗ್ರೇಡ್‌ –ಬಿ.ಫೌಜಿಯಾ ತರನ್ನುಮ್

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸಾಧನೆಗೆ ಸಿಇಒ ಸಂತಸ
Last Updated 21 ಮೇ 2022, 4:18 IST
ಅಕ್ಷರ ಗಾತ್ರ

ಕೊಪ್ಪಳ:ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯ ಶೇ 87.71 ರಷ್ಟು ಸಾಧನೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒಬಿ.ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ 66.99 ರಷ್ಟಾಗಿತ್ತು. 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ. 87.71 ರಷ್ಟಾಗಿದ್ದು, ಶೇ 20.72 ಫಲಿತಾಂಶ ಹೆಚ್ಚಳವಾಗಿದೆ.

2017-18ನೇ ಸಾಲಿನಲ್ಲಿ ಫಲಿತಾಂಶ ಶೇ 80.43 ರಷ್ಟಾಗಿ ರಾಜ್ಯದಲ್ಲಿ 19ನೇ ಸ್ಥಾನ ಪಡೆದರೆ, 2018-19 ರಲ್ಲಿ ಶೇ 81.36 ರಷ್ಟು 16ನೇ ಸ್ಥಾನ, 2019-20 ರಲ್ಲಿ ಶೇ 66.99 23ನೇ ಸ್ಥಾನ ಹಾಗೂ 2020-21 ರಲ್ಲಿ ಶೇ 100 ರಷ್ಟು (ಕೋವಿಡ್ –ಎಂಸಿಕ್ಯೂ ಎಕ್ಸಾಂ) ಆಗಿತ್ತು. ಪ್ರಸ್ತುತ ಜಿಲ್ಲೆಯ ಶೇ 87.71 ರಷ್ಟು ಸಾಧನೆಯಾಗುವ ಮೂಲಕ 2021-22ನೇ ಸಾಲಿನಲ್ಲಿ ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯು `ಎ’ ಸ್ಥಾನವನ್ನು ಪಡೆದಿದೆ.

ವಿಷಯವಾರು ಫಲಿತಾಂಶವನ್ನು ಗಮನಿಸಿದಾಗ ದ್ವೀತಿಯ ಭಾಷಾ ವಿಷಯದಲ್ಲಿ ಶೇ 95.76 ಅತೀ ಹೆಚ್ಚು ಮಕ್ಕಳು ಉತ್ತಿರ್ಣರಾಗಿದ್ದಾರೆ. ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯದಲ್ಲಿ ಶೇ 87.71 ಉತ್ತೀರ್ಣರಾಗಿದ್ದಾರೆ. ಪ್ರಥಮ ಭಾಷೆಯಲ್ಲಿ ಶೇ 87. ವಿಷಯವಾರು ಫಲಿತಾಂಶವನ್ನು ಪರಿಗಣಿಸಿದರೂ ಸಹ ಎಲ್ಲ ವಿಷಯಗಳಲ್ಲಿ ಬಾಲಕರಿಗಿಂತ ಬಾಲಕಿಯರೇ ಹೆಚ್ಚು ಉತ್ತಿರ್ಣರಾಗಿದ್ದಾರೆ.

ಫಲಿತಾಂಶ ಹೆಚ್ಚಳಕ್ಕೆ ಕಾರಣ:ಜ್ಞಾನಜ್ಯೋತಿ ಕಾರ್ಯಕ್ರಮ ಅನುಷ್ಠಾನ, ಸಿ.ಎಸ್.ಆರ್ ಫಂಡ್ ನಿಂದ ಮುದ್ರಣಗೊಂಡ ಚಿಗುರು ಪುಸ್ತಕ. ಕಲಿಕಾ ಮಿತ್ರರಿಂದ 60 ಜನ ಸಂಪನ್ಮೂಲ ವ್ಯಕ್ತಿಗಳ ತಂಡ ರಚನೆ. ಸ್ಪೂರ್ತಿ ಬಂದು ಅಧಿಕಾರಿಗಳಿಗೆ ಸರ್ಕಾರಿ ಶಾಲೆಗಳ ದತ್ತು ಯೋಜನೆ ಹಾಗೂ ನಿರಂತರ ಭೇಟಿ ಸುಮಾರು 1,600 ಶಾಲಾ ಭೇಟಿಗಳಾಗಿವೆ.

ಜಿಲ್ಲಾ ಮಟ್ಟದಲ್ಲಿ 3 ಪರೀಕ್ಷೆಗಳ ಆಯೋಜನೆ.ಪ್ಲ್ಯಾನ್‌- 75 ವಿನೂತನ ಕಾರ್ಯಕ್ರಮ ಅಳವಡಿಕೆ. ಪ್ರತಿ ಹದಿನೈದು ದಿನಗಳಿಗೊಮ್ಮೆ ಜಿ.ಪ.ಸಿಇಒ ಅಧ್ಯಕ್ಷತೆಯಲ್ಲಿ ಸ್ಪೂರ್ತಿ ಬಂದು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ. ರಂಗೋಲಿಯಲ್ಲಿ ವಿಜ್ಞಾನ, ರೇಡಿಯೋ ಕಾರ್ಯಕ್ರಮ, ಜಿಲ್ಲಾಮಟ್ಟದಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ಫೋನ್ ನೇರ ಕಾರ್ಯಕ್ರಮ ಆಯೋಜನೆ.

ಮಕ್ಕಳ ಕಲಿಕಾ ಸಾಮರ್ಥ್ಯ ಆಧರಿಸಿ ಹಸಿರು ಹಳದಿ ಕೆಂಪು ಗುಂಪುಗಳಾಗಿ ವಿಂಗಡಣೆ ಹಾಗೂ ನಿರಂತರ ಮಾರ್ಗದ ರ್ಶನ. ಪರೀಕ್ಷಾ ಭಯ ನಿವಾರಣೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಇತ್ಯಾದಿ ಕಾರ್ಯಕ್ರಮಗಳು ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕಾರಣವಾಯಿತು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT