ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ರಾಜ್ಯ ಸರ್ಕಾರ ದಿವಾಳಿಯಾಗಿದೆ: ಹಿಟ್ನಾಳ ಆರೋಪ

Last Updated 3 ಡಿಸೆಂಬರ್ 2022, 8:28 IST
ಅಕ್ಷರ ಗಾತ್ರ

ಕೊಪ್ಪಳ: ‘ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ದಿವಾಳಿಯಾಗಿದೆ. ಭ್ರಷ್ಟಚಾರ ಅನ್ನುವುದು ಬಿಟ್ಟರೆ ಯಾವುದೇ ಜನಪರ ಅಭಿವೃದ್ದಿ ಕೆಲಸಗಳು ರಾಜ್ಯದಲ್ಲಿ ಆಗುತ್ತಿಲ್ಲ. ಯಾವುದಾದರೂ ಕೆಲಸಗಳನ್ನ ಕ್ಷೇತ್ರಕ್ಕೆ ಮಂಜೂರು ಮಾಡಿಸಿ ಕೊಡುವಂತೆ ಮನವಿ ಮಾಡಿದರೆ ಮುಖ್ಯಮಂತ್ರಿಗಳು ಸಚಿವರು ಓಕೆ ಅನ್ನುತ್ತಾರೆ ಹೊರತು ಕಾರ್ಯರೂಪಕ್ಕೆ ಬರುವುದಿಲ್ಲ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆರೋಪಿಸಿದರು.

ಮಂಗಳವಾರ ಹಿಟ್ನಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹುಲಿಗಿ, ಮುನಿರಬಾದ್ ಆರ್.ಎಸ್., ಹಳೇಲಿಂಗಾಪುರ, ಹೊಸಲಿಂಗಾಪುರ ಹಾಗೂ ಹೊಸಳ್ಳಿ ಗ್ರಾಮಗಳಲ್ಲಿ ಅಂದಾಜು ₹85 ಲಕ್ಷ ಮೊತ್ತದಲ್ಲಿ ವಿವಿಧ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಹುಲಿಗಿಯಲ್ಲಿ ರೈಲ್ವೆ ಗೇಟ್‌ಗೆ ಫ್ಳೈ ಓವರ್‌ ನಿರ್ಮಾಣ ಆಗಬೇಕೆಂಬುದು ಬಹುವರ್ಷಗಳ ಕನಸು. ಈ ಕುರಿತು ಸಚಿವ ಸೋಮಣ್ಣ ಅವರೊಂದಿಗೆ ಚರ್ಚಿಸಿದ್ದೇನೆ. ಯೋಜನೆಗೆ ಬೇಕಾದ ₹17 ಕೋಟಿ ಮಂಜೂರು ಮಾಡಿಸಿ ಎಂದು ಮನವಿ ಮಾಡಿದ್ದೇನೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜನಾರ್ದನ ಹುಲಿಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಹುಲಿಗಿ, ಉಪಾಧ್ಯಕ್ಷೆ ಲಕ್ಷ್ಮಿದೇವಿ ರಾಮೂರ್ತಿ, ಮುಖಂಡರಾದ ಯಂಕಪ್ಪ ಹೊಸಳ್ಳಿ, ಈರಣ್ಣ ಹುಲಿಗಿ, ಜಿಯಾಸಾಬ್, ದಿವಾಕರ್ ಹುಲಿಗಿ, ನಿಂಗಜ್ಜ ಶಹಾಪುರ, ಅಶೋಕ ಹಿಟ್ನಾಳ, ತಹಶೀಲ್ದಾರ್ ಅಮರೇಶ ಬಿರದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡೇಶ ತುರಾದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT