ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ | ಮುಖ್ಯಶಿಕ್ಷಕನಿಂದ ವಿದ್ಯಾರ್ಥಿನಿಗೆ ಥಳಿತ: ಪಾಲಕರ ಆಕ್ರೋಶ

Published : 9 ಸೆಪ್ಟೆಂಬರ್ 2024, 15:15 IST
Last Updated : 9 ಸೆಪ್ಟೆಂಬರ್ 2024, 15:15 IST
ಫಾಲೋ ಮಾಡಿ
Comments

ಗಂಗಾವತಿ: ಪ್ರಾಜೆಕ್ಟ್ ವರದಿ ತೋರಿಸಲು ಹೋದಾಗ ಮುಖ್ಯಶಿಕ್ಷಕ ಕೃಷ್ಣಪ್ಪ 10ನೇ ತರಗತಿ ಇಂಗ್ಲಿಷ್‌ ಮಾಧ್ಯಮದ ವಿದ್ಯಾರ್ಥಿನಿ ಸೌಮ್ಯಳನ್ನು ನಿಂದಿಸಿ, ಕಿವಿಗೆ ಹೊಡೆದು ಗಾಯಗೊಳಿಸಿದ್ದನ್ನು ಖಂಡಿಸಿ ಎಂಎನ್‌ಎಂ ಪ್ರೌಢಶಾಲೆಯ ಆವರಣದಲ್ಲಿ ವಿದ್ಯಾರ್ಥಿನಿಯರು, ಡಿಎಸ್ಎಸ್, ಎಸ್ಎಫ್ಐ ಮುಖಂಡರು ಈಚೆಗೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿನಿ ಸೌಮ್ಯ ಮಾತನಾಡಿ,‘ಹತ್ತನೇ ತರಗತಿಗೆ ಸಂಬಂಧಪಟ್ಟ ಪ್ರಾಜೆಕ್ಟ್ ತಯಾರಿಸಿ, ಮುಖ್ಯ ಶಿಕ್ಷಕರಿಗೆ ತೋರಿಸಲು ಕಚೇರಿಗೆ ಹೋಗಿದ್ದೆ. ನಿಮ್ಮನ್ನು ಇಲ್ಲಿಗೆ ಯಾರ ಬರಲು ಹೇಳಿದ್ದಾರೆ ಎಂದು ಕಿವಿಗೆ ಥಳಿಸಿದ್ದು, ಕಿವಿಯೋಲೆ ಚುಚ್ಚಿಕೊಂಡು ಕಿವಿಯಲ್ಲಿ ರಕ್ತ ಸಾವ್ರವಾಗಿದೆ. ನಾವು ಯಾವ ತಪ್ಪು ಮಾಡಿಲ್ಲ. ಆದ್ರೂ ಹೊಡೆದಿದ್ದಾರೆ. ಯಾವಾಗಲೂ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳನ್ನ ಸಹಿಸುವುದಿಲ್ಲ. ಏನೋ ಒಂದು ಬಯ್ಯೋದೆ ಅವರ ಕೆಲಸವಾಗಿರುತ್ತದೆ. ತೋರಿಸಲು ಹೋದ ಪ್ರಾಜೆಕ್ಟ್ ವರದಿಯ ಪ್ರತಿಗಳನ್ನ ಹರಿದು ಹಾಕಿದ್ದಾರೆ’ ಎಂದು ದೂರಿದರು.

ಡಿಎಸ್ಎಸ್ ಮುಖಂಡ ಅಮರೇಶ, ಎಸ್ಎಫ್ಐ ಸಂಘಟನೆ ಗ್ಯಾನೇಶ ಕಡಗದ ಮಾತನಾಡಿ,‘ವಿದ್ಯಾರ್ಥಿಗಳನ್ನ ಸುಖಾಸುಮ್ಮನೆ ನಿಂದಿಸುವುದು, ಥಳಿಸುವುದು ಶಿಕ್ಷಕರ ಕರ್ತವ್ಯವಲ್ಲ. ಅದನ್ನು ಮೊದಲು ಶಿಕ್ಷಕ ತಿಳಿಯಬೇಕು. ಇಂತಹ ಶಿಕ್ಷಕರನ್ನ ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದರು.

ಶಾಲೆಗೆ ಪಾಲಕರ ಭೇಟಿ, ಆಕ್ರೋಶ:

ವಿದ್ಯಾರ್ಥಿನಿ ಕಿವಿಗೆ ಮುಖ್ಯಶಿಕ್ಷಕ ಹೊಡೆದಿದ್ದ ವಿಷಯ ತಿಳಿದ ಪಾಲಕರು ಶಾಲೆಗೆ ಸೋಮವಾರ ಭೇಟಿ ನೀಡಿದ್ದು, ಈ ವೇಳೆಯಲ್ಲಿ ಮುಖ್ಯಶಿಕ್ಷಕ ಕೃಷ್ಣಪ್ಪ ರಜೆಯಲ್ಲಿದ್ದರು. ಕೂಡಲೇ ಸಹ ಶಿಕ್ಷಕರಿಗೆ ಮಾಹಿತಿ ನೀಡಿ, ಪಾಲಕರು, ವಿದ್ಯಾರ್ಥಿಗಳು ಮುಖ್ಯಶಿಕ್ಷಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಶಿಕ್ಷಕನ ವಿರುದ್ದ ಕ್ರಮಕ್ಕೆ ಬಿಇಒ ಭರವಸೆ:

ವಿದ್ಯಾರ್ಥಿನಿಯನ್ನು ಥಳಿಸಿದ ವಿಷಯ ತಿಳಿದ ಕೂಡಲೇ ಮುಖ್ಯಶಿಕ್ಷಕನಿಗೆ ಕಾರಣ ಕೇಳಿದ್ದು, ವಿದ್ಯಾರ್ಥಿಯನ್ನು ಥಳಿಸಿರುವುದಾಗಿ ಒಪ್ಪಿದ್ದು, ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಪ್ರಜಾವಾಣಿಗೆ ಮಾಹಿತಿ ನೀಡಿದ್ದಾರೆ.

ಬಿಎಫ್‌ಟಿ ಮಂಜುನಾಥ, ಬಿಇಒ ಕಚೇರಿಯ ಸಿಬ್ಬಂದಿ ಆನಂದ ನಾಗಮ್ಮನವರ, ರಾಘವೇಂದ್ರ ಅವರು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT