ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲಿಗೆ ಯಂತ್ರ ವಿತರಣೆ

Last Updated 26 ಜನವರಿ 2022, 11:14 IST
ಅಕ್ಷರ ಗಾತ್ರ

ಕನಕಗಿರಿ: ತಾಲ್ಲೂಕಿನ ಹುಲಿಹೈದರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 73ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಳಮ್ಮ ಉಡುಚಪ್ಪ ಪೂಜಾರ ಅವರು ಅಂಗವಿಕಲರಿಗೆ ಸೋಲಾರ್ ದೀಪ, ಪಠ್ಯಪುಸ್ತಕ ಮತ್ತು ಹೊಲಿಗೆ ಯಂತ್ರ ವಿತರಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಕುಲಕರ್ಣಿ ಅವರು ಸಂವಿಧಾನದ ಮಹತ್ವದ ಕುರಿತು ಮಾತನಾಡಿದರು.

ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಶಂಕರಪ್ಪ ಚನ್ನದಾಸರ, ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತಪ್ಪ ಗೋಡಿ, ಕೆಡಿಪಿ ಸದಸ್ಯ ಗುರುಮೂರ್ತಿಗೌಡ, ಗ್ರಾ.ಪಂ. ಸದಸ್ಯರಾದ ಬೇಗ್ಂ ಶಾಮೀದಸಾಬ ಅಡ್ಡಿ, ಜಗದೀಶ ಗದ್ದಿ, ಸವಿತಾ ಹನುಮೇಶ, ಕಂಠೆಪ್ಪ, ರಾಜಾಸಾಬ, ಪ್ರಮುಖರಾದ ಜೀಲನಸಾಬ ಕಾತರಕಿ, ಶರತ್ ಚಂದ್ರ ನಾಯಕ ಹಾಗೂ ಗ್ರಾ.ಪಂ. ಸದಸ್ಯರು ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT