ಶನಿವಾರ, ಡಿಸೆಂಬರ್ 4, 2021
20 °C
ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಆಚಾರ ಅಭಿಮತ

ಶಿಕ್ಷಕರಿಗೆ ಗೌರವ ಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಬುರ್ಗಾ: ತಂದೆ ತಾಯಿಗಳಿಗೆ ಕೊಡುವ ಗೌರವವನ್ನು ವಿದ್ಯೆ ಕಲಿಸಿದ ಗುರುವಿಗೂ ಕೊಡುವುದನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಶಾಸಕ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೂ ಅದಕ್ಕೆ ಮೂಲ ಗುಣಾತ್ಮಕ ಶಿಕ್ಷಕ ಅಗತ್ಯ. ಇಂಥ ಅತ್ಯವಶ್ಯಕ ಶಿಕ್ಷಣವು ಶಿಕ್ಷಕರಿಂದ ಮಾತ್ರ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರ ಜವಾಬ್ದಾರಿ ಹಾಗೂ ಮಹತ್ವದ ಪಾತ್ರಗಳ ಬಗ್ಗೆ ಬೇರೆ ಹೇಳಬೇಕಿಲ್ಲ ಎಂದರು.

ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯ, ಉತ್ತಮ ನಾಗರಿಕ ಸಮಾಜ ನಿರ್ಮಾಣವನ್ನು ಸಾಧ್ಯವಾಗಿಸುತ್ತದೆ. ದೇಶದ ಬೆನ್ನೆಲುಬು ಯುವಕರು ಸಂಪನ್ಮೂಲ ವ್ಯಕ್ತಿಗಳಾಗಿ ತಯಾರಾಗಬೇಕಾಗಿದೆ. ಹಾಗೆಯೇ ಯುವಕರು ಶಿಕ್ಷಕರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವಿದ್ಯೆಯ ಜತೆಗೆ ವಿನಯತೆ ಮುಖ್ಯ ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಪತ್ತಾರ ಮಾತನಾಡಿ, ತಾಲ್ಲೂಕಿನಲ್ಲಿ ಶೈಕ್ಷಣಿಕ ಸಾಧನೆ, ಶಿಕ್ಷಕರ ಸಾಧನೆ ಹಾಗೂ ಕ್ಷೇತ್ರದಲ್ಲಿನ ಬೇಕು ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು.

ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಕೂಕನೂರು ತಾಪಂ ಅಧ್ಯಕ್ಷ ಜಗನ್ನಾಥ ಪಾಟೀಲ್, ತಹಶೀಲ್ದಾರ ಶ್ರೀಶೈಲ ತಳವಾರ, ತಾಪಂ ಇಓ ಡಾ. ಜಯರಾಂ ಚವ್ಹಾಣ ಇದ್ದರು. ನಿವೃತ್ತ ಶಿಕ್ಷಕರಿಗೆ ಗೌರವಿಸಲಾಯಿತು. ಸುರೇಶ ಮಾದಿನೂರು ಸ್ವಾಗತಿಸಿದರು. ಶರಣಪ್ಪ ಕೊಪ್ಪದ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.