ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ತರಬೇತಿ ಸಂಸ್ಥೆ: ಶೇ.100ರಷ್ಟು ಸಾಧನೆ

Published 4 ಆಗಸ್ಟ್ 2023, 15:30 IST
Last Updated 4 ಆಗಸ್ಟ್ 2023, 15:30 IST
ಅಕ್ಷರ ಗಾತ್ರ

ತಾವರಗೇರಾ: ಸ್ಥಳೀಯ ತಾವರಗೇರಾ ಶಿಕ್ಷಕರ ತರಬೇತಿ ಸಂಸ್ಥೆಗೆ ಶೇ100 ರಷ್ಟು ಫಲಿತಾಂಶ ಬಂದಿದೆ. ದ್ವಿತೀಯ ವರ್ಷದ 21 ಪ್ರಶಿಕ್ಷಣಾರ್ಥಿಗಳಲ್ಲಿ ಉನ್ನತ ಶ್ರೇಣಿ 12, ಪ್ರಥಮ ಶ್ರೇಣಿ 5 ಹಾಗೂ ದ್ವಿತೀಯ ಶ್ರೇಣಿ 4ರಲ್ಲಿ ಉತ್ತೀರ್ಣರಾಗಿ ಶೇ.100 ರಷ್ಟು ಸಾಧನೆ ಮಾಡಿದ್ದಾರೆ.

ಅತಿ ಹೆಚ್ಚು ಅಂಕ ಪಡೆದವರು: ಲಕ್ಷ್ಮೀ ಫಕೀರಪ್ಪ (ಶೇ.89.18) ಪ್ರಥಮ, ಸುರೇಶ ಛತ್ರಪ್ಪ ಗರಜನಾಳ (ಶೇ.88.75) ದ್ವಿತೀಯ ಹಾಗೂ ಸಾವಿತ್ರಿ ಶರಣೇಗೌಡ ಓಲಿ (ಶೇ.88.62) ತೃತೀಯ ಸ್ಥಾನ ಪಡೆದಿದ್ದಾರೆ.

ಡಿಎಲ್ಎಡ್‌ ಪ್ರಥಮ ಫಲಿತಾಂಶ: ಇದೇ ತರಬೇತಿ ಸಂಸ್ಥೆಯ ಪ್ರಥಮ ವರ್ಷದ ಪರೀಕ್ಷೆಗೆ ಹಾಜರಾದ 27 ಪ್ರಶಿಕ್ಷಣಾರ್ಥಿಗಳು ಉತ್ತೀರ್ಣರಾಗಿದ್ದು. ಶೇ.100 ಕಾಲೇಜಿನ ಫಲಿತಾಂಶ ಬಂದಿದೆ.
ಪ್ರಥಮ ವರ್ಷದ ಕಾವ್ಯ ವಿರೇಂದ್ರ ಗುಬ್ಬಿ( ಶೇ.92.62) ಪ್ರಥಮ, ರಕ್ಷಿತಾ ವೀರಭದ್ರಗೌಡ(ಶೇ.92.37)ದ್ವಿತೀಯ ಸ್ಥಾನ ಮತ್ತು ಶಿವಲೀಲಾ ವೀರಭದ್ರಪ್ಪ ಗದ್ದಿ(ಶೇ.91.87) ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಶಿಕ್ಷಣಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಉಪಾಧ್ಯಕ್ಷ ಶರಣಪ್ಪ ಐಲಿ, ಕಾರ್ಯದರ್ಶಿ ಮಲ್ಲನಗೌಡ ಓಲಿ. ಖಜಾಂಚಿ ಪಂಪಣ್ಣ ಚಿಟ್ಟಿ, ಆಡಳಿತ ಮಂಡಳಿಯ ಸರ್ವ ನಿರ್ದೇಶಕರು, ಸದಸ್ಯರು , ಕಾಲೇಜಿನ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಸುರೇಶ ಗರಜನಾಳ -ದ್ವಿತೀಯ
ಸುರೇಶ ಗರಜನಾಳ -ದ್ವಿತೀಯ
ಸಾವಿತ್ರಿ ಶರಣೇಗೌಡ - ತೃತೀಯ
ಸಾವಿತ್ರಿ ಶರಣೇಗೌಡ - ತೃತೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT