ಕೊಪ್ಪಳ: ಜಿಲ್ಲೆಯ ಜನಸಾಮಾನ್ಯರು ಹಾಗೂ ನ್ಯಾಯಾಲಯದ ನಡುವೆ ಸೇತುವೆಯಾಗಿ ಕಾರ್ಯನಿರ್ವವಹಿಸಲು ಅರೆಕಾಲಿಕ ಕಾನೂನು ಸ್ವಯಂ ಸೇವಕರ ಪಡೆ ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದ್ದು, ಈ ಪ್ರಾಧಿಕಾರದ ವತಿಯಿಂದ ಸ್ವಯಂ ಸೇವಕರ ತಂಡವನ್ನು ರಚಿಸಲಾಗಿದೆ. ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ 99, ಯಲಬುರ್ಗಾ ತಾಲ್ಲೂಕು 36, ಯಲಬುರ್ಗಾ ತಾಲ್ಲೂಕು 36, ಗಂಗಾವತಿ ತಾಲ್ಲೂಕು 46 ಮತ್ತು ಕುಷ್ಟಗಿ ತಾಲ್ಲೂಕು ವ್ಯಾಪ್ತಿಯಲ್ಲಿ 35 ಸದಸ್ಯರನ್ನು ಒಳಗೊಂಡ ತಂಡ ರಚನೆ ಮಾಡಲಾಗಿದ್ದು ಇದರಲ್ಲಿ ನಿವೃತ್ತ ಶಿಕ್ಷಕರು, ಪ್ರಾಧ್ಯಾಪಕರು, ನಿವೃತ್ತ ಸೈನಿಕರು, ಅಂಗನವಾಡಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಹೋರಾಟಗಾರರು, ವೈದ್ಯರು, ಸೈನಿಕರ ಪತ್ನಿ ಹಾಗೂ ಪತ್ರಕರ್ತರು ಹೀಗೆ ವಿವಿಧ ವೃತ್ತಿಗಳಲ್ಲಿ ತೊಡಗಿರುವವರು ಇದ್ದಾರೆ.

ಜನ ಸಾಮಾನ್ಯರಿಗೆ ಉಚಿತವಾಗಿ ಕಾನೂನಿನ ಅಗತ್ಯ ನೆರವು, ಸೌಲಭ್ಯ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಕಲ್ಪಿಸಬಹುದಾದ ವ್ಯವಸ್ಥೆಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ. ಸ್ವಯಂ ಸೇವಕರನ್ನು ಸೇತುವೆಯಾಗಿ ಬಳಸಿಕೊಂಡು ಜನಸಾಮಾನ್ಯರಿಗೂ ನ್ಯಾಯಾಲಯದ ಸವಲತ್ತುಗಳನ್ನು ನೀಡುವ ಪ್ರಯತ್ನ ಮಾಡಲಾಗುತ್ತಿದೆ.

ವಿವಿಧ ವೃತ್ತಿಗಳಲ್ಲಿ ತೊಡಗಿರುವ ಮತ್ತು ಜಿಲ್ಲೆಯಾದ್ಯಂತ ಇರುವ ಸ್ವಯಂ ಸೇವಕರ ಜೊತೆ ಜನ ತಮಗೆ ನ್ಯಾಯಾಲಯದ ಮೂಲಕ ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು. ಅನ್ಯಾಯ ಹಾಗೂ ಶೋಷಣೆಗೆ ಒಳಗಾದವರು ತಮ್ಮ ಸಮಸ್ಯೆಯನ್ನು ಅರೆಕಾಲಿಕ ಕಾನೂನು ಸ್ವಯಂಸೇವಕರ ಮುಂದೆ ಹೇಳಿಕೊಂಡರೆ ಅದನ್ನು ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತಂದು ನೆರವು ಒದಗಿಸಲಾಗುತ್ತದೆ.

ಸರ್ಕಾರದ ಯೋಜನೆಗಳನ್ನು ಹೇಗೆ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ. ನ್ಯಾಯಾಲಯದಿಂದ ಜನಸಾಮಾನ್ಯರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಲು ಈಗಾಗಲೇ ತಹಶೀಲ್ದಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಮಹಿಳಾ ಪೊಲೀಸ್ ಠಾಣೆ, ಸಿಡಿಪಿಒ ಕಚೇರಿ, ಅಳವಂಡಿ ಹೀಗೆ ಹಲವು ಕಡೆ ಕ್ಲಿನಿಕ್ಗಳನ್ನು ಆರಂಭಿಸಲಾಗಿದೆ. ಇಲ್ಲಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಇಬ್ಬರು ಕೆಲಸ ಮಾಡುತ್ತಾರೆ. ಗವಿಮಠದ ಜಾತ್ರೆ, ಮರ್ದಾನ್ ಅಲಿ ದರ್ಗಾ ಹೀಗೆ ಹೆಚ್ಚು ಜನಸಂದಣಿ ಸೇರುವ ಸಮಯದಲ್ಲಿಯೂ ಪ್ರಾಧಿಕಾರದಿಂದ ನೆರವು ಒದಗಿಸಲು ಅಭಿಯಾನ ನಡೆಸಲಾಗುತ್ತಿದೆ.

ಇಂದಿನಿಂದ ಮೂರು ದಿನಗಳ ತರಬೇತಿ

ಅರೆಕಾಲಿಕ ಕಾನೂನು ಸ್ವಯಂ ಸೇವಕರು ಕೆಲಸ ಮಾಡಬೇಕಾದ ವಿಧಾನ ತಿಳಿದುಕೊಂಡಿರಬೇಕಾದ ವಿಷಯಗಳ ಬಗ್ಗೆ ಮಾಹಿತಿ ಒದಗಿಸಲು ಬುಧವಾರದಿಂದ (ಫೆ. 4) ಮೂರು ದಿನಗಳ ಕಾಲ ಕೊಪ್ಪಳದ ಸಾಹಿತ್ಯಭವನದಲ್ಲಿ ತರಬೇತಿ ಕಾರ್ಯಾಗಾರ ಜರುಗಲಿದೆ. ಕಾನೂನು ಸೇವೆಗಳ ಪ್ರಾಧಿಕಾರ ಔಟ್ಲಾವ್ಡ್ ಇಂಡಿಯಾ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ನಡೆಯಲಿದ್ದು ಮೊದಲ ದಿನ ಪ್ರಧಾನ ಜಿಲ್ಲಾ ಮತ್ತು ಸಷೆನ್ಸ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್ ಸಿ.ಅವರು ಉದ್ಘಾಟನೆ ನೆರವೇರಿಸುವರು. ನ್ಯಾಯಾಲಯದ ವಿವಿಧ ನ್ಯಾಯಾಧೀಶರು ವಕೀಲರ ಸಂಘದವರು ಸಂಪನ್ಮೂಲ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಅರೆಕಾಲಿಕ ಕಾನೂನು ಸ್ವಯಂ ಸೇವಕರು ಜನಸಾಮಾನ್ಯರು ಹಾಗೂ ನ್ಯಾಯಾಲಯದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು. ನೊಂದವರಿಗೆ ನ್ಯಾಯ ಒದಗಿಸಲು ಶ್ರಮಿಸಬೇಕು.
ಮಹಾಂತೇಶ ಎಸ್. ದರಗದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.