ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ: ಕಾಂಗ್ರೆಸ್ ಕಚೇರಿ ಸಹಾಯಕನಿಗೆ ಉಪಾಧ್ಯಕ್ಷ ಸ್ಥಾನ ಖಚಿತ

ಕನಕಗಿರಿ ಪಟ್ಟಣ ಪಂಚಾಯಿತಿ: ಅಧ್ಯಕ್ಷ ಬಿಸಿಎ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲು
ಮೆಹಬೂಬಹುಸೇನ
Published : 6 ಆಗಸ್ಟ್ 2024, 5:46 IST
Last Updated : 6 ಆಗಸ್ಟ್ 2024, 5:46 IST
ಫಾಲೋ ಮಾಡಿ
Comments

ಕನಕಗಿರಿ: 32 ತಿಂಗಳುಗಳ ಹಿಂದೆ ಇಲ್ಲಿನ‌ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ‌ ಮೀಸಲಾತಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಆಕಾಂಕ್ಷಿಗಳಿಗೆ ಸೋಮವಾರ ಸಂತಸ ತಂದಿದೆ.

ಪೌರಾಡಳಿತ ಇಲಾಖೆ ಸೋಮವಾರ ಮೀಸಲಾತಿ ಪ್ರಕಟಿಸಿದೆ. ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ‌ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.

ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ 2021ರ ಡಿಸೆಂಬರ್ 27ರಂದು ಚುನಾವಣೆ ನಡೆದು ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಿತ್ತು. 17 ಸ್ಥಾನಗಳ ಪೈಕಿ 12 ಜನ ಕಾಂಗ್ರೆಸ್ ಹಾಗೂ 5 ಮಂದಿ‌ ಬಿಜೆಪಿಯಿಂದ ಆಯ್ಕೆಯಾಗಿದ್ದರು.

ಅಧ್ಯಕ್ಷ ಸ್ಥಾನದ‌ ಮೇಲೆ ಬಹುತೇಕರು ಕಣ್ಣಿಟ್ಟಿದ್ದು ‘ಸಾಮಾನ್ಯ ವರ್ಗ’ದ ಮೀಸಲಾತಿ ಬರುತ್ತದೆ ಎಂದು‌ ನಿರೀಕ್ಷೆ ಹೊಂದಿದ್ದರು. ಈಗ ಪ್ರಕಟವಾದ ಮೀಸಲಾತಿ ಆಕಾಂಕ್ಷಿಗಳ ಆಸೆಗೆ ತಣ್ಣೀರು ಎರಚಿದೆ.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಐದನೇಯ ವಾರ್ಡ್‌ ಸದಸ್ಯ ಕಂಠಿರಂಗ ನಾಯಕ ಒಬ್ಬರೇ ಪರಿಶಿಷ್ಟ ಪಂಗಡದಿಂದ ಆಯ್ಕೆಯಾಗಿರುವುದರಿಂದ ನಾಯಕ ಅವರು ಉಪಾಧ್ಯಕ್ಷರಾಗುವುದು‌ ಬಹುತೇಕ ಖಚಿತವಾಗಿದೆ.

ಪಟ್ಟಣ ಪಂಚಾಯಿತಿ ಚುನಾವಣೆಗೂ ಮುಂಚೆ ಕಂಠಿರಂಗ ಅವರು ಇಲ್ಲಿನ‌ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಪಟ್ಟಣ ಪಂಚಾಯಿತಿಯ ವಿವಿಧ ವಾರ್ಡ್‌ಗಳಿಗೆ ಮೀಸಲಾತಿ ಘೋಷಣೆಯಾದಾಗ 5ನೇ ವಾರ್ಡ್ ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ‌) ಮೀಸಲು ಬಂದಿತ್ತು.

ಕಾಂಗ್ರೆಸ್ ಟಿಕೆಟ್ ಪಡೆಯಲು ಆರೇಳು ಜನ ಆಕಾಂಕ್ಷಿಗಳಿದ್ದರು. ಕಾಂಗ್ರೆಸ್ ಮುಖಂಡರು ಹಾಗೂ ವಾರ್ಡ್ ಮತದಾರರು ಕಂಠಿರಂಗ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು‌ ಹಿಡಿದು ಯಶಸ್ವಿಯಾಗಿದ್ದಲ್ಲದೆ ಗೆಲುವಿನ ದಡ ಸೇರಿಸಿದ್ದರು.

ಈಗ ಉಪಾಧ್ಯಕ್ಷ ಸ್ಥಾನ ತಾನಾಗಿಯೇ ಒಲಿದು ಬಂದಿದ್ದು, ನಾಯಕ ಬೆಂಬಲಿಗರಲ್ಲಿ ಹರ್ಷ ತಂದಿದೆ. ಇನ್ನೂ ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆ ಬಂದಿದ್ದು, ಒಟ್ಟು ನಾಲ್ಕು ಜನ ಆಕಾಂಕ್ಷಿಗಳಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕೃಪೆ ಯಾರ ಮೇಲಿದೆ ಎಂಬುದು ಚುನಾವಣೆ ದಿನ ಗೊತ್ತಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT