ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲು ಬಡಿದು ದೇವಸ್ಥಾನದ ಗೋಪುರಕ್ಕೆ ಹಾನಿ

Published 13 ಏಪ್ರಿಲ್ 2024, 13:17 IST
Last Updated 13 ಏಪ್ರಿಲ್ 2024, 13:17 IST
ಅಕ್ಷರ ಗಾತ್ರ

ಕ‌ನಕಗಿರಿ (ಕೊಪ್ಪಳ ಜಿಲ್ಲೆ): ಸಿಡಿಲು ಬಡಿದು ದೇವಸ್ಥಾನದ ಗೋಪುರ ಬಿರುಕು ಬಿಟ್ಟ ಘಟನೆ ಸಮೀಪದ ನವಲಿ ತಾಂಡದಲ್ಲಿ ಶನಿವಾರ ನಡೆದಿದೆ. ತಾಂಡಾದಲ್ಲಿ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ.

ಸಿಡಿಲಿನ ಆರ್ಭಟಕ್ಕೆ ಜನವಸತಿ ಪ್ರದೇಶದಲ್ಲಿರುವ ದುರಗಮ್ಮ ದೇವಿ ದೇವಸ್ಥಾನದ ಗೋಪುರ ಬಿರುಕು ಬಿಟ್ಟಿದೆ. ಸಿಡಿಲಿಗೆ ಹೊಡೆತಕ್ಕೆ ಜನರು ಬೆಚ್ಚಿ ಬಿದ್ದಿದ್ದು ಕೂಗಾಟ, ಚೀರಾಟ ಮಾಡಿದ್ದಾರೆ. ದೇಗುಲದ ನೆರೆ ಮನೆಗಳು ಹಾನಿಯಾಗಿವೆ. ಟಿವಿ, ಮೊಬೈಲ್ ,ಮನೆಗೆ ಹಾಕಿರುವ ವಿದ್ಯುತ್ ಮೀಟರ್‌, ವೈರ್ ಸುಟ್ಟು ಹೋಗಿವೆ. ಮನೆಗಳಲ್ಲಿ ಅಡುಗೆ ಸಾಮಗ್ರಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT