ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಟ್ಟಣ ಪಂಚಾಯಿತಿ ವಾಹನಗಳಿಗೆ ನೋಂದಣಿಯೇ ಇಲ್ಲ!

Published : 25 ಮೇ 2023, 5:50 IST
Last Updated : 25 ಮೇ 2023, 5:50 IST
ಫಾಲೋ ಮಾಡಿ
Comments

ತಾವರಗೇರಾ: ಸ್ಥಳೀಯ ಪಟ್ಟಣ ಪಂಚಾಯಿತಿ ಆಡಳಿತ ಕಚೇರಿಯು 2018–19ರ ಆರ್ಥಿಕ ವರ್ಷದಿಂದ ಇಲ್ಲಿವರೆಗೆ ಖರೀದಿಸಿರುವ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆಯನ್ನು ನೊಂದಣಿಯೇ ಮಾಡಿಸಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಪಟ್ಟಣದ 22 ಸಾವಿರ ಜನಸಂಖ್ಯೆಗೆ 18 ವಾರ್ಡ್‌ಗಳು ಇದ್ದು, ಪ್ರತಿನಿತ್ಯ ಪಟ್ಟಣ ಪಂಚಾಯಿತಿ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಸೇರಿ ಒಟ್ಟು 28 ಜನ ಇದೇ ವಾಹನಗಳನ್ನು ಬಳಸಿ ಕಸ ವಿಲೇವಾರಿ ಮಾಡುತ್ತಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನೋಂದಣಿಯಾಗದ ಎಲ್ಲಾ ವಾಹನಗಳನ್ನು ಬಳಸುವ ಪೌರ ಕಾರ್ಮಿಕರ ವಾಹನಗಳು ಅಪಘಾತಕ್ಕೆ ಒಳಗಾದರೆ ಗತಿಯೇನು? ಎನ್ನುವ ಪ್ರಶ್ನೆ ಎದುರಾಗಿದೆ.

ತಾವರಗೇರಾ ಪ.ಪಂ. ವಾಹನಗಳಿಗೆ ನೋಂದಣಿ ಮಾಡದ ವಿಷಯ ಗಮನಕ್ಕೆ ಬಂದಿಲ್ಲ. ನೋಂದಣಿ ಮಾಡುವುದು ಕಡ್ಡಾಯ. ಈ ಬಗ್ಗೆ ಮಾಹಿತಿ ಪಡೆದು ತುರ್ತು ಕ್ರಮ ಕೈಗೊಳ್ಳುತ್ತೇನೆ.
ಕೆ. ರಾಘವೇಂದ್ರ, ತಹಶೀಲ್ದಾರ್‌

2019–20ನೇ ಸಾಲಿನ 14ನೇ ಹಣಕಾಸು ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್‌ ಖರೀದಿ ಮಾಡಲಾಗಿದ್ದು, ಅದನ್ನೂ ನೋಂದಣೆ ಮಾಡಿಲ್ಲ. ಅದರಂತೆ ಮೂರು ಟಾಟಾ ಎಸಿ ವಾಹನಗಳನ್ನು 2016- 2017ನೇ ಸಾಲಿನ 14ನೇ ಹಣಕಾಸು ಯೋಜನೆಯಲ್ಲಿ ಖರೀದಿ ಮಾಡಲಾಗಿದೆ. 2 ನೀರಿನ ಟ್ಯಾಂಕರ್‌ಗಳನ್ನು 2015 ಮತ್ತು 2016ನೇ ಸಾಲಿನಲ್ಲಿ ಖರೀದಿಸಲಾಗಿದೆ. ಸರ್ಕಾರದ ಭಾಗವೇ ಆದ ಪಟ್ಟಣ ಪಂಚಾಯಿತಿ ತನ್ನ ಸುಪರ್ದಿಯಲ್ಲಿರುವ ವಾಹನಗಳನ್ನು ನೋಂದಣಿ ಮಾಡಿಸದಿರುವುದು ಹಲವು ಚರ್ಚೆಗಳಿಗೂ ಕಾರಣವಾಗಿದೆ. 

ತಾವರಗೇರಾ ಪ.ಪಂ. ಮುಖ್ಯಾಧಿಕಾರಿ ನಭೀಸಾಬ ಖುದನ್ನವರ ಈ ಕುರಿತು ಪ್ರತಿಕ್ರಿಯಿಸಿ ‘ಸರ್ಕಾರದ ನಿಯಮಾವಳಿ ಪ್ರಕಾರ ಈಗಾಗಲೇ ನೋಂದಣಿ ಮಾಡಿಸಬೇಕಾಗಿತ್ತು. ನಾನು ಇಲ್ಲಿ ನೇಮಕವಾದ ಕೆಲ ದಿನಗಳಲ್ಲಿಯೇ ಇದೇ ವಿಷಯದ ಕುರಿತು ಆರೋಗ್ಯ ನಿರೀಕ್ಷಕರಿಗೆ ನೋಟಿಸ್‌ ನೀಡಿದ್ದೆ. ನಾಲ್ಕು ದಿನಗಳಲ್ಲಿ ನೋಂದಣಿ ಮಾಡಿಸುವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT