ಕುಷ್ಟಗಿ: ಪ್ರಮುಖ ರಸ್ತೆಗಳ ಎರಡೂ ಬದಿಯಲ್ಲಿ ಅರಣ್ಯ ಇಲಾಖೆ ಬೆಳೆಸಿರುವ ವಿವಿಧ ಅರಣ್ಯ ಜಾತಿ ಗಿಡಗಳ ರೆಂಬೆಕೊಂಬೆಗಳನ್ನು ಕತ್ತರಿಸುತ್ತಿರುವುದರಿಂದ ಬೆಳೆವಣಿಗೆ ಹಂತದಲ್ಲೇ ಗಿಡಗಳು ಹಾಳಾಗುತ್ತಿರುವುದು ಕಂಡುಬಂದಿದೆ.

ಪಟ್ಟಣದ ಹನುಮಸಾಗರ, ಗಜೇಂದ್ರಗಡ, ಕೊಪ್ಪಳ, ಸಿಂಧನೂರು ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳ ವತಿಯಿಂದ ಬೇವು ಮತ್ತಿತರೆ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಅದರಲ್ಲೂ ಸಿಂಧನೂರು ಮಾರ್ಗದಲ್ಲಿನ ಬೇವು ಇತರೆ ಗಿಡಗಳು ಅತ್ಯುತ್ತಮ ರೀತಿಯಲ್ಲಿ ಬೆಳೆದು ಹಸರಿನಿಂದ ಕಂಗೊಳಿಸುತ್ತಿದ್ದು ದಾರಿಹೋಕರ ಕಣ್ಮನ ಸೆಳೆಯುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸಾಕಷ್ಟು ಪರಿಶ್ರಮ, ಆರೈಕೆಯಿಂದಾಗಿ ಗಿಡಗಳು ಬೆಳೆದಿವೆ.

ನಾಟಿ ಮಾಡಿದ ನಂತರ ನಿರ್ವಹಣೆ ಅವಧಿ ಪೂರ್ಣಗೊಂಡಿದ್ದು ಗಿಡಗಳಿಗೆ ಈಗ ನೀರು ಹಾಕುವ ಅಥವಾ ಮುಳ್ಳು ಕಟ್ಟಿ ಆರೈಕೆ ಮಾಡುವ ಅಗತ್ಯವಿಲ್ಲದೆ ಸ್ವಾಭಾವಿಕವಾಗಿಯೇ ಬೆಳೆಯುತ್ತಿವೆ. ಆದರೆ ಗಿಡಗಳಿಗೆ ಬೇಕಿರುವುದು ಕಿಡಿಗೇಡಿಗಳ ಕೃತ್ಯದಿಂದ ರಕ್ಷಣೆ ಮಾತ್ರ. ಇತ್ತೀಚಿನ ದಿನಗಳಲ್ಲಿ ಕುರಿಗಾಹಿಗಳ ಕಾಟ ಹೆಚ್ಚಾಗಿದ್ದು ಅಲ್ಲಲ್ಲಿ ಗಿಡಗಳನ್ನು ಕತ್ತರಿಸಿ ಬೋಳು ಮಾಡಿರುವುದು ಕಂಡುಬಂದಿದೆ.

ಸಿಂಧನೂರು ರಸ್ತೆಯಲ್ಲಿ ಬೆಳಿಗ್ಗೆ ಗಿಡಗಳನ್ನು ಕಡಿಯುತ್ತಿರುವ ಮಾಹಿತಿಯಿಂದ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಕುರಿಗಾಹಿಗಳಿಗೆ ಎಚ್ಚರಿಕೆ ನೀಡಿ ಕಳಿಸಿದರು.

ಕುರಿಗಳಿಗೆ ಬೇವಿನ ಸೊಪ್ಪು ಮೇಯಿಸಲು ಕುರಿಗಾಹಿಗಳು ಮನ ಬಂದಂತೆ ಕೊಡಲಿಯಿಂದ ಕಡಿದು ಹಾಳು ಮಾಡುತ್ತಿದ್ದಾರೆ. ನಿಡಶೇಸಿ ಕೆರೆ ಸುತ್ತಲಿನ ಗಿಡಗಳ ಕೊಂಬೆಗಳನ್ನು ಕತ್ತರಿಸಲಾಗುತ್ತಿದೆ. ಹೀಗೇ ಬಿಟ್ಟರೆ ರಸ್ತೆ ಬದಿ, ಕೆರೆ ದಂಡೆಯ ಮೇಲಿರುವ ಉಳಿದ ಗಿಡಗಳಿಗೂ ಇದೇ ಗತಿ ಬರುತ್ತದೆ. ಗಿಡಗಳನ್ನು ಹಾಳು ಮಾಡುವವರನ್ನು ಗುರುತಿಸಿ ಕಾನೂನು ಕ್ರಮ ಜರುಗಿಸುವ ಮೂಲಕ ಅರಣ್ಯ ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದರು.

ದನಕರುಗಳನ್ನು ಮೇಯಿಸುವವರಿಂದ ಗಿಡಗಳಿಗೆ ತೊಂದರೆ ಇಲ್ಲ, ಕುರಿಗಾಹಿಗಳದ್ದೇ ದೊಡ್ಡ ಸಮಸ್ಯೆಯಾಗಿದೆ. ಅಡವಿಭಾವಿ ಸೇರಿದಂತೆ ಅರಣ್ಯ ಇಲಾಖೆಗೆ ಸೇರಿದ ಇತರೆ ಗುಡ್ಡ, ಇಳಿಜಾರು ಪ್ರದೇಶದಲ್ಲಿ ಸಸಿಗಳನ್ನು ನಾಟಿ ಮಾಡಿದರೆ ಕುರಿಗಳನ್ನು ಬಿಟ್ಟು ಹಾಳು ಮಾಡಲಾಗುತ್ತಿದೆ. ಎಚ್ಚರಿಕೆ ನೀಡಿದರೆ ಅದನ್ನು ಅಧಿಕಾರಸ್ಥ ರಾಜಕಾರಣಿಗಳ ಬಳಿ ದೂರು ಹೇಳುತ್ತಾರೆ. ಕುರಿ ಮೇಯಿಸುವುದಕ್ಕೆ ಆಕ್ಷೇಪಿಸಬೇಡಿ ಎಂದೇ ರಾಜಕಾರಣಿಗಳು ಅರಣ್ಯ ಸಿಬ್ಬಂದಿಗೆ ತಾಕೀತು ಮಾಡುತ್ತಾರೆ. ಹಾಗಾದರೆ ಗಿಡಗಳು ಹೇಗೆ ಬೆಳೆಯಬೇಕು, ಅವುಗಳಿಗೆ ರಕ್ಷಣೆ ಒದಗಿಸುವುದಾದರೂ ಹೇಗೆ ಮೇಲಾಗಿ ನಮ್ಮ ಇಲಾಖೆ ಕೆಲಸವಾದರೂ ಏನು? ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅರಣ್ಯ ಇಲಾಖೆ ಸಿಬ್ಬಂದಿ ‘ಪ್ರಜಾವಾಣಿ’ ಬಳಿ ಬೇಸರ ಹೊರಹಾಕಿದರು.

ರಸ್ತೆ ಪಕ್ಕದಲ್ಲಿ ಶ್ರಮವಹಿಸಿ ಬೆಳೆಸಿರುವ ಗಿಡಗಳ ರಕ್ಷಣೆಗೆ ಇಲಾಖೆ ನಿಗಾ ವಹಿಸಿದೆ ಜತೆಗೆ ಸಾರ್ವಜನಿಕರ ಜವಾಬ್ದಾರಿಯೂ ಇದೆ
ಶಿವರಾಜ ಮೇಟಿ ವಲಯ ಅರಣ್ಯಾಧಿಕಾರಿ

ಬೇವು ಇತರೆ ಗಿಡಗಳು ಸಮೃದ್ಧವಾಗಿ ಬೆಳೆದು ಕಣ್ಮನ ಸೆಳೆಯುತ್ತಿವೆ. ಆದರೆ ಅನೇಕ ಗಿಡಗಳು ಕೊಡಲಿ ಏಟಿಗೆ ತುತ್ತಾಗುತ್ತಿದ್ದು ಅಧಿಕಾರಿಗಳು ಕ್ರಮ ವಹಿಸಬೇಕಿದೆ
ಶರಣಗೌಡ ಗುಮಗೇರಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.