ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೆಳಭಾಗದಿಂದ ನೀರು ಪೋಲಾಗುತ್ತಿರುವುದು
ಶಿವರಾಜ ತಂಗಡಗಿ
ಬಾಗಿರುವ ಆರು ಗೇಟ್‌ಗಳ ಮೂಲಕ ನೀರು ಹೊರಬಿಡಲು ಸಾಧ್ಯವಿಲ್ಲ. ಉಳಿದ ಗೇಟ್‌ಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ. ಎಲ್ಲ ಗೇಟ್ ಬದಲಾವಣೆ ಮಾಡಲಾಗುತ್ತದೆ.
ಶಿವರಾಜ ತಂಗಡಗಿ ಐಸಿಸಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ
ಜನಾರ್ದನ ರೆಡ್ಡಿ
ಕಳೆದ ಬೇಸಿಗೆಯಲ್ಲಿಯೇ ಮುತುವರ್ಜಿ ವಹಿಸಿ ಸರ್ಕಾರ ಗೇಟ್ ಬದಲಿಸಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು. ಈಗ ಆರು ಗೇಟ್ ಬಾಗಿರುವುದರಿಂದ ಜಲಾಶಯಕ್ಕೆ ಆಪತ್ತು ಎದುರಾಗಿದೆ.
ಜನಾರ್ದನ ರೆಡ್ಡಿ ಶಾಸಕ
ಅಧಿಕಾರಿಗಳ ಬದಲಾವಣೆಗೆ ಪತ್ರ
‘ಜಲಾಶಯ ಯೋಜನೆಯ ಲಾಭ ಪಡೆಯುವ ರಾಜ್ಯಗಳನ್ನು ಬಿಟ್ಟು ಬೇರೆಯವರು ಮಂಡಳಿಯ ಅಧಿಕಾರಿಗಳಾಗಿರಬೇಕು ಎಂಬ ನಿಯಮವಿದೆ. ಆದರೆ ತುಂಗಭದ್ರಾ ಮಂಡಳಿಯಲ್ಲಿ ಆಂಧ್ರದ ಅಧಿಕಾರಿಗಳೇ ಇದ್ದಾರೆ. ಈ ಕುರಿತು ಅನೇಕ ಬಾರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಜಲಾಶಯದ ನಿರ್ವಹಣೆ ಹಾಗೂ ಹೊಸ ಗೇಟ್‌ಗಳ ಅಳವಡಿಕೆ ವಿಚಾರದಲ್ಲಿ ಕೇಂದ್ರವೇ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಶಿವರಾಜ ತಂಗಡಗಿ ತಿಳಿಸಿದರು.
19ನೇ ಕ್ರಸ್ಟ್‌ಗೇಟ್‌ನಿಂದಲೂ ನೀರು ಸೋರಿಕೆ
ಗಟ್ಟಿಯಾಗಿರುವ ಹಳೆಯ ಗೇಟ್‌ಗಳಲ್ಲಿ ಎಲ್ಲಿಯೂ ಸೋರಿಕೆಯಾಗುತ್ತಿಲ್ಲ. ಆದರೆ ಒಂದು ವರ್ಷದ ಹಿಂದೆ ತಾತ್ಕಾಲಿಕವಾಗಿ ಅಳವಡಿಸಿರುವ 19ನೇ ಕ್ರಸ್ಟ್‌ಗೇಟ್‌ನಿಂದ ಹಲವು ದಿನಗಳಿಂದ ನೀರು ಸೋರಿಕೆಯಾಗುತ್ತಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತುಂಗಭದ್ರಾ ಮಂಡಳಿಯ ತಾಂತ್ರಿಕ ಅಧಿಕಾರಿ ರಾಘವೇಂದ್ರ ‘ನೀರಿನ ವೇಗ ಮತ್ತು ಅಲೆಗಳ ಪ್ರಮಾಣ ವ್ಯಾಪಕವಾಗಿರುವ ಕಾರಣ ಗೇಟ್ ಪೂರ್ಣವಾಗಿ ಮುಚ್ಚಲು ಆಗಿಲ್ಲ. 19ನೇ ಗೇಟ್‌ನಿಂದ ನೀರು ಸೋರಿಕೆ ಸಂಪೂರ್ಣ ನಿಲ್ಲಿಸುತ್ತೇವೆ’ ಎಂದರು.