ಕೊಪ್ಪಳ: ತುಂಗಭದ್ರಾ ಜಲಾಶಯದ ಗೇಟ್ ಸಂಖ್ಯೆ 19ಕ್ಕೆ ತಾತ್ಕಾಲಿಕವಾಗಿ ಎಲಿಮೆಂಟ್ ಅಳವಡಿಕೆ ಕಾರ್ಯ ಯಶಸ್ಸಿನ ಹಾದಿಯಲ್ಲಿ ಸಾಗಿದ್ದು, ಮೂರನೆ ಎಲಿಮೆಂಟ್ ಅಳವಡಿಕೆಯೂ ಶನಿವಾರ ಯಶಸ್ಸು ಕಂಡಿದೆ.
ರಭಸವಾಗಿ ಹರಿಯುವ ನೀರಿನ ನಡುವೆಯೂ ತಾಂತ್ರಿಕ ಸಿಬ್ಬಂದಿ ತಂಡ ಮೂರನೆ ಎಲಿಮೆಂಟ್ ಅಳವಡಿಸಿತು. 19ನೇ ಗೇಟ್ ಅಕ್ಕಪಕ್ಕದ ಗೇಟ್ ಗಳಿಂದ ನೀರು ಹರಿಸುವುದನ್ನು ನಿಲ್ಲಿಸಿ ಹೊಸ ಗೇಟ್ ನ ಕಾರ್ಯಭಾರ ನಿರ್ವಹಣೆ ಸಾಮರ್ಥ್ಯ ಬಗ್ಗೆಯೂ ಪರೀಕ್ಷೆ ಮಾಡಲಾಯಿತು.