ಕೊಪ್ಪಳ: ಬಳ್ಳಾರಿಯ ಚೈತನ್ಯ ಗ್ರೂಪ್‍ನ ಇಲ್ಲಿನ ಚೈತನ್ಯ ಪಿಯು ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಾಹಿತ್ಯ ಎಂ. ಗೊಂಡಬಾಳ ಪಿಯು ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದುಕೊಂಡಿದ್ದಾಳೆ.
ಕರಾಟೆಯ ಕುಮಿತೆ 56 ಕೆ.ಜಿ. ವಿಭಾಗ ಮತ್ತು ಜಂಪ್‌ರೋಪ್‌ನ 30 ಸೆಕೆಂಡ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ರಾಷ್ಟ್ರೀಯ ಸಿಲಾತ್ ತರಬೇತುದಾರ ರಜಾಕ್ ಹುಸೇನ್ ಹನುಮಸಾಗರ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ತಿರುಪತಿ ನಾಯಕ, ಮಲ್ಲಪ್ಪ, ಅಂಬರೀಶ ಇತರರು ಬಹುಮಾನ ಪಾರಿತೋಷಕ ವಿತರಿಸಿದರು.