ಯಲಬುರ್ಗಾ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದ ಉಪ್ಪಾರ ಸಮಾಜದ ಸಮಗ್ರ ಅಭಿವೃದ್ಧಿ ಸಾಧಿಸಬೇಕಾದರೆ ಸರ್ಕಾರದ ಪ್ರೋತ್ಸಾಹದ ಅಗತ್ಯವಿದೆ. ಅದಕ್ಕಾಗಿ ಸಮಾಜದ ಜನರು ಸಂಘಟಿತರಾಗಿ ಹಕ್ಕೊತ್ತಾಯ ಮಾಡಬೇಕು ಎಂದು ಉಪ್ಪಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪೂಜಾರ ಹೇಳಿದರು.

ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಮಾಜದ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಸಮಾಜದ ಪ್ರತಿಯೊಬ್ಬರು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆಗೆ ಹೆಚ್ಚಿನ ಒತ್ತು ಕೊಡಬೇಕಾಗಿದೆ ಎಂದು ತಿಳಿಅಸಿದರು. ಸಮಾಜ ಸಂಘಟನೆಗೆ ವಿವಿಧ ಘಟಕಗಳ ಪದಾಧಿಕಾರಿಗಳನ್ನು ಆಯ್ಕೆಮಾಡುವುದು ಅವಶ್ಯವಾಗಿದ್ದು, ಪ್ರತಿಯೊಂದು ಗ್ರಾಮಗಳಲ್ಲಿರುವ ಸಮಾಜದವರು ಸಂಘಟನೆಯಲ್ಲಿ ಭಾಗಿಯಾಗಬೇಕು. ಸಮಾಜ ಪ್ರಗತಿ ಹೊಂದಬೇಕಾದರೆ ಪ್ರತಿಯೊಬ್ಬರು ಸಕ್ರಿಯವಾಗಿ ಭಾಗವಹಿಸಿ ಅಭಿವೃದ್ಧಿಗೆ ಶ್ರಮಿಸಬೇಕು. ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಮುಂದಿನ ಭಾನುವಾರ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ನಿವೃತ್ತ ಮುಖ್ಯ ಶಿಕ್ಷಕ ವೈ.ಬಿ.ಮೇಟಿ ಮಾತನಾಡಿ, ಸಮಾಜವು ಯಾವುದೇ ಪಕ್ಷ, ಪಂಗಡಕ್ಕೆ ಸೀಮಿತವಾಗಬಾರದ. ಸಂಘಟಿತರಾಗುವುದು ಶೈಕ್ಷಣಿಕ ಹಾಗೂ ಆರ್ಥಿಕ ಸುಧಾರಣೆಗೆ ಬಹಳ ಮುಖ್ಯವಾಗಿದೆ. ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದ ಬಸವರಾಜ ಅವರು ಜಿಲ್ಲಾ ಘಟಲದ ಅಧ್ಯಕ್ಷರಾಗಿ ನೇಮಕಗೊಂಡಿದ್ದರಿಂದ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಗುರುತಿಸಿದರೆ ಮುಂದಿನ ದಿನದಲ್ಲಿ ಅವರನ್ನು ಅಂತಿಮಗೊಳಿಸಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.

ಸಮಾಜದ ಮುಖಂಡರಾದ ಶರಣಪ್ಪ ಉಪ್ಪಾರ, ಮಹಾದೇವಪ್ಪ, ಹುಚ್ಚಿರಿಪ್ಪ ತುಮ್ಮರಗುದ್ದಿ, ಶರಣಪ್ಪ ಜಗಳೂರು, ಶರಣಪ್ಪ ಗದ್ದಿ, ಶರಣಪ್ಪ ಬಡ್ಡಿ, ಕನಕಪ್ಪ ಹೊಸಳ್ಳಿ, ಶಿವನಂದಪ್ಪ, ಸುಂದರಗೌಡ ಪಾಟೀಲ, ಶ್ರೀಕಾತ ಕಲಕಬಂಡಿ, ಪುತ್ರಪ್ಪ ಕಲ್ಲೂರು, ಸಣ್ಣಪ್ಪ ಉಪ್ಪಾರ, ಸಣ್ಣ ಈರಪ್ಪ ದಸ್ತಾನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.