ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಮನ ಜಯಂತಿ ಆಚರಣೆ

Last Updated 19 ಜನವರಿ 2021, 12:13 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವೇಮನ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಹೆಚ್ಚುವರಿಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ಸಮಾಜದ ಮುಖಂಡರಾದ ಜಗದೀಶಪ್ಪ ಸಿಂಗನಾಳ, ಪ್ರಭು ಹೆಬ್ಬಾಳ, ಕಾಶೀನಾಥರೆಡ್ಡಿ, ಹೇಮರೆಡ್ಡಿ ಬಿಕನಳ್ಳಿ, ಡಾ.ಶ್ರೀನಿವಾಸ್, ಮಹೇಂದ್ರಗೌಡ ಮೈನಳ್ಳಿ ಹಾಗೂ ಹೇಮರೆಡ್ಡಿ ಇದ್ದರು.

ಮಹಾಯೋಗಿಯ ಸ್ಮರಣೆ

ಗಂಗಾವತಿನಗರದ ತಾಲ್ಲೂಕು ಆಡಳಿತ ಕಚೇರಿಯಲ್ಲಿ ಮಂಗಳವಾರ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು.

ಪ್ರಭಾರ ತಹಶೀಲ್ದಾರ್‌ ವರ್ಣಿತ್‌ ನೆಗೀ ಅವರು ಮಹಾಯೋಗಿ ವೇಮನರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಶಿರಸ್ತೇದಾರ್‌ ವಿ.ಎಚ್.ಹೊರಪೇಟೆ, ರೆಡ್ಡಿ ಸಮಾಜದ ತಾಲ್ಲೂಕು ಮುಖಂಡ ವಿರೂಪಾಕ್ಷಪ್ಪ ಸಿಂಗನಾಳ್‌, ಆರ್.ಪಿ.ರೆಡ್ಡಿ ವಕೀಲ, ವಿರೂಪಾಕ್ಷ ರೆಡ್ಡಿ, ಶಂಕರಗೌಡ ಮಾಲಿಪಾಟೀಲ, ನಗರಸಭೆ ಸದಸ್ಯ ಉಮೇಶ ಸಿಂಗನಾಳ, ವಿಶ್ವನಾಥ್ ಕೇಸರಹಟ್ಟಿ, ರಾಜೇಶ ಅಂಗಡಿ ಹಾಗೂ ಚನ್ನಬಸವ ಜೇಕಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT