ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ| ನಗರಸಭೆಯ ಚುನಾವಣೆ ವೇಳೆ ವಿಪ್‌ ಉಲ್ಲಂಘನೆ: ಅನರ್ಹಗೊಳಿಸಲು ಬಿಜೆಪಿ ದೂರು

Published 5 ಸೆಪ್ಟೆಂಬರ್ 2024, 5:06 IST
Last Updated 5 ಸೆಪ್ಟೆಂಬರ್ 2024, 5:06 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ವೇಳೆ ಪಕ್ಷ ಜಾರಿ ಮಾಡಿದ್ದ ವಿಪ್‌ ಉಲ್ಲಂಘಿಸಿದ ತನ್ನ ಮೂವರು ಸದಸ್ಯರನ್ನು ಅನರ್ಹಗೊಳಿಸಬೇಕು ಎಂದು ಬಿಜೆಪಿ ಬುಧವಾರ ಪೌರಾಯುಕ್ತ ಗಣಪತಿ ಪಾಟೀಲ ಅವರಿಗೆ ಮನವಿ ಸಲ್ಲಿಸಿದೆ. 

ಪಕ್ಷದ ಜಿಲ್ಲಾಧ್ಯಕ್ಷ ನವೀನಕುಮಾರ್‌ ಗುಳಗಣ್ಣನವರ ಪೌರೌಯುಕ್ತರಿಗೆ ಅರ್ಜಿ ಸಲ್ಲಿಸಿ ‘ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 2012ರ ಅಡಿ ವಿಪ್‌ ಉಲ್ಲಂಘಿಸಿದ ಅಶ್ವಿನಿ ಬಿ. ಗದಗಿನಮಠ, ಬಸಮ್ಮ ದಿವಟೂರು ಹಾಗೂ ಅನ್ನಪೂರ್ಣಮ್ಮ ಬಳಗೇರಿ ಅವರನ್ನು ಅನರ್ಹರನ್ನಾಗಿ ಮಾಡಬೇಕು ಎಂದು ಕೋರಿದರು.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಪ್ರಮುಖರಾದ ಡಾ. ಬಸವರಾಜ ಕ್ಯಾವಟರ್‌, ರಾಘವೇಂದ್ರ ಪಾನಘಂಟಿ, ರಾಜು ಬಾಕಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ನಾಡಿಗೇರ, ಸುನಿಲ್ ಹೆಸರೂರ್, ರಮೇಶ ಕವಲೂರು, ಗಣೇಶ ಹೊರತಟ್ನಾಳ, ಮಹಾಲಕ್ಷ್ಮಿ ಕಂದಾರಿ, ಮಹೇಶ ಅಂಗಡಿ, ಅಮಿತ್ ಕಂಪ್ಲಿಕರ್, ವಿ.ಎಂ. ಭೂಸನೂರ ಮಠ, ಸಿಂಗ್ರಿ ವಕೀಲರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT