ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ | ವಿರೂಪಾಕ್ಷೇಶ್ವರ ದೇವಸ್ಥಾನ ಹುಂಡಿ ಹಣ ಎಣಿಕೆ

Published 31 ಜನವರಿ 2024, 14:20 IST
Last Updated 31 ಜನವರಿ 2024, 14:20 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ಹಿರೇಜಂತಕಲ್ ಸಮೀಪದ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ತಹಶೀಲ್ದಾರ್‌ ಯು.ನಾಗರಾಜ ನೇತೃತ್ವದಲ್ಲಿ ಮಂಗಳವಾರ ಹುಂಡಿ ಹಣ ಎಣಿಕೆ ಮಾಡ ಲಾಯಿತು.

ಹುಂಡಿಯಲ್ಲಿ ₹1,05,340 (ಜ.30) ಹಣ ಸಂಗ್ರಹವಾಗಿದೆ. ಕಳೆದ ಬಾರಿ (ಮೆ.23, 2023) ಎಣಿಕೆ ಮಾಡಿದ ವೇಳೆ ₹62,770 ಹಣ ಸಂಗ್ರಹವಾಗಿತ್ತು.

ಈ ಕಾರ್ಯದ ನಂತರ ಮುಂಬರುವ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನ ಜಾತ್ರಾ ಸಿದ್ಧತೆ ಬಗ್ಗೆ ಸ್ಥಳೀಯರ ಜತೆ ಪೂರ್ವಭಾವಿ ಸಭೆ ನಡೆಸಿ, ಜಾತ್ರೆ ನೆರವೇರಿಕೆಗೆ ಬೇಕಾಗುವ ಸಿದ್ಧತೆಯ ನಿರ್ಧಾರಗಳು ಕೈಗೊಳ್ಳಲಾಯಿತು.

ಗ್ರೇಡ್- 2 ತಹಶೀಲ್ದಾರ್ ಮಹಾಂತಗೌಡ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ನಗರಠಾಣೆ ಪಿಐ ಪ್ರಕಾಶ ಮಾಳೆ, ಸ್ಥಳೀಯರಾದ ಸೋಮಪ್ಪ ಯಲಬುರ್ಗಿ, ಪರಶುರಾಮ, ಬಸವರಾಜ, ನಾಗರಾಜ, ವಿನಯ ಪಾಟಿಲ ಸೇರಿ ಅರಣ್ಯ, ಆರೋಗ್ಯ, ವಿದ್ಯುತ್, ಅಬಕಾರಿ, ಲೋಕೋಪಯೋಗಿ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿ ಸ್ಥಳೀಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT