ಕೊಪ್ಪಳ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಸ್ವಾತಂತ್ರ್ಯ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಕೇಂದ್ರದ ರಾಜಕೀಯ ಒತ್ತಡಕ್ಕೆ ಮಣಿದು ಜಾರಿ ನಿರ್ದೇಶನಾಲಯದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರ ವಿಚಾರಣೆ ಸ್ವಾತಂತ್ರ್ಯ ಚಳವಳಿಗೆ ಮಾಡುತ್ತಿರುವ ಅಪಚಾರ’ ಎಂದು ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್. ಮಾಡಿಲ್ಲ. ಕಾನೂನು ಕೂಡ ಪಾಲಿಸಿಲ್ಲ. ಈ ಮೂಲಕ ರಾಜಕೀಯ ಒತ್ತಡಕ್ಕೆ ಮಣಿದು ಜಾರಿ ನಿರ್ದೇಶನಾಲಯ, ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೆ ತೊಂದರೆ ಕೊಡುತ್ತಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಹಾಗೂ ಸಾಕಷ್ಟು ಹೋರಾಟಗಾರರು ಸೇರಿ ಪ್ರಾರಂಭಿಸಿದ ಪತ್ರಿಕೆಯ ವಿರುದ್ಧ ದಾಳಿ ಮಾಡಿಸಿದ್ದಾರೆ. ಪ್ರಕರಣ ದಾಖಲಿಸದೇ ದಾಳಿ ಮಾಡಿದ್ದಕ್ಕೆ ದೆಹಲಿಯ ವಿಶೇಷ ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ರಾಜಕೀಯ ಸೇಡಿನಿಂದ ಪ್ರಕರಣ ದಾಖಲಿಸಿದ್ದೀರಿ ಎಂದು ಪ್ರಕರಣ ಊರ್ಜಿತ ಮಾಡಿದ್ದಾರೆ’ ಎಂದರು.

‘ಆರ್.ಎಸ್.ಎಸ್ ಸಂಘಟನೆಯನ್ನೇಕೆ ನೋಂದಾಯಿಸಿಲ್ಲ?. ಈ ಸಂಘಟನೆಯು ಲಕ್ಷಾಂತರ ಕೋಟಿ ಮೊತ್ತದ ಹಣವನ್ನು ಗುರುದಕ್ಷಿಣೆ ರೂಪದಲ್ಲಿ ಪಡೆಯುತ್ತಿದ್ದು, ಇದರ ಕೆಳಗೆ ನೂರಾರು ಸಂಸ್ಥೆಗಳಿವೆ. ಅಲ್ಲದೇ ಮೂರು ಸಾವಿರಕ್ಕೂ ಹೆಚ್ಚು ಪೂರ್ಣಾವಧಿ ಕಾರ್ಯಕರ್ತರಿದ್ದಾರೆ. ಇವರಿಗೆ ಹೇಗೆ ವೇತನ ಪಾವತಿಸುತ್ತೀರಿ. ಇದರ ಸಂಪೂರ್ಣ ಲೆಕ್ಕ ಎಲ್ಲಿದೆ?. ಇದನ್ನೇ ದೇಶದ್ರೋಹ ಎನ್ನುತ್ತಾರೆ’ ಎಂದು ಹೇಳಿದರು.

‘ನರೇಗಾ ಹೆಸರು ಬದಲಾಯಿಸಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಅಂಟು ಹಾಕಿಕೊಂಡು ಅಧಿಕಾರಕ್ಕಾಗಿ ಕುರ್ಚಿಗೆ ಅಂಟಿಕೊಂಡಿದ್ದಾರೆ. ಬಿಜೆಪಿ ನಾಯಕರಿಗೆ ಗಾಂಧೀಜಿ ಹಾಗೂ ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ರಾಜೀನಾಮೆ ಕೊಡಬೇಕು. ಅಲ್ಲದೇ ದೇಶದ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ದೇಶದ ಜನ ಪ್ರಬುದ್ಧರಿದ್ದು, ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯುತ್ತಾರೆ’ ಎಂದರು.

ಶ್ರೀರಾಮ ಉತ್ತಮ ಸಮಾಜಕ್ಕಾಗಿ ಕೆಲಸ ಮಾಡಿದ್ದಾನೆ. ರಾಮನ ಆಶಯದಂತೆ ಬಿಜೆಪಿಯವರು ನಡೆದುಕೊಳ್ಳುವುದಿಲ್ಲ. ತನ್ನ ಪತ್ನಿಯನ್ನೇ ರಕ್ಷಣೆ ಮಾಡದ ಪ್ರಧಾನಿ ನರೇಂದ್ರ ಮೋದಿಗೆ ರಾಮನ ಹೆಸರೇಳಲು ಅರ್ಹತೆ ಇದೆಯೆ? ಶ್ರೀರಾಮ ಜಾತಿರಹಿತ, ವರ್ಗರಹಿತ, ಸಮಪಾಲು, ಸಮ ಬಾಳು, ಸಮಾನ ಅವಕಾಶದ ಸಮಾಜ ಕಟ್ಟಿದ್ದರು. ವಾಲ್ಮೀಕಿ ರಾಮಾಯಣದ ಮೂಲಕ ತಿಳಿಸಿದ್ದರು. ಕೇಂದ್ರದ ಬಿಜೆಪಿ ನಾಯಕರು ರಾಮನ ಆಶಯದಂತೆ ನಡೆಯುತ್ತಿದ್ದೀರಾ? ರಾಮನ ಭಂಟ ಹನುಮ ಉದಯಿಸಿದ ನಾಡು ಅಂಜನಾದ್ರಿ ಅಭಿವೃದ್ಧಿಗೆ ಬದ್ದತೆ ತೋರಿದ್ದಾರೆಯೇ? ಎಂದು ಪ್ರಶ್ನೆ ಮಾಡಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಅಕ್ಬರ್ ಪಾಶಾ ಪಲ್ಟನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ, ಕೆಪಿಸಿಸಿ ವಕ್ತಾರೆ ಶೈಲಜಾ ಹಿರೇಮಠ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿ.ಪಂ.ಮಾಜಿ ಸದಸ್ಯ ಪ್ರಸನ್ನ ಗಡಾದ, ಕಿಶೋರಿ ಬೂದನೂರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.