ಕೊಪ್ಪಳ: ರಾಷ್ಟ್ರೀಯ ಗಣಿತ ದಿನಾಚರಣೆ ಪ್ರಯುಕ್ತ ತಾಲ್ಲೂಕಿನ ಚಿಲಕಮುಖಿ ಸರ್ಕಾರಿಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕಅಶೋಕ ಮುರಾಳ ವಹಿಸಿದ್ದರು, ಗಣಿತ ವೇದಿಕೆ ಅಧ್ಯಕ್ಷ ರಾಮಣ್ಣ ಡಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ರಮೇಶ ಉಡುಮಕಲ್, ಜಯಕುಮಾರ, ಎಸ್‍ವಿಇಎಂಎಸ್ ಕೊಪ್ಪಳ ಇವರು ಪಾಲ್ಗೊಂಡಿದ್ದರು, ಮುಖ್ಯಅತಿಥಿಗಳಾಗಿ ರಾಮರಡ್ಡಿ, ಕೃಷ್ಣಮೂರ್ತಿ, ಶರಣಬಸನಗೌಡ, ಮಂಜುನಾಥ ಕಟ್ಟಿ, ಪ್ರಭಾಕರ ಬಡಿಗೇರ ಇತರರುಉಪನ್ಯಾಸ ನೀಡಿದರು.

ಮುಖ್ಯಶಿಕ್ಷಕ ಅಶೋಕ ಮುರಾಳ ಮಾತನಾಡಿ, ಗಣಿತ ಶಿಕ್ಷಕರು ವಿಶೇಷ ಕೌಶಲಗಳನ್ನು ಬಳಸಿಕೊಂಡು ಕುತೂಹಲ ಉಂಟಾಗುವಂತೆ ಭೋಧನೆ ಮಾಡಿ ಮುಂಬರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಉತ್ತಮ ಫಲಿತಾಂಶವನ್ನು ತರಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಗಣಿತ ಕ್ಷೇತ್ರದ ತಜ್ಞ ಪಿತಾಮಹ ಶ್ರೀನಿವಾಸ್ ರಾಮಾನುಜನ್, ಜಯಕುಮಾರ್ ಅವರ ಸಾಧನೆ, ಜೀವನವನ್ನು ಮಕ್ಕಳಿಗೆ ವಿವರಿಸಬೇಕು. ಸಾಂಧರ್ಬಿಕವಾಗಿ ತರಗತಿ ಕೋಣೆಯಲ್ಲಿ ಮಕ್ಕಳಿಗೆ ಪ್ರೇರಣೆಯಾಗುವಂತೆ ಭೋಧಿಸಬೇಕು ಎಂದು ಸಲಹೆ ನೀಡಿದರು.

ಕೃಷ್ಣ ಪುರೋಹಿತ ಸ್ವಾಗತಿಸಿದರು, ಕಾರ್ಯದರ್ಶಿ ನಜೀರ್ ಅಹ್ಮದ ನಿರೂಪಿಸಿದರು. ರುದ್ರೇಶ ಬಳ್ಳಾರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.