ಕೊಪ್ಪಳ: ರಸ್ತೆಯ ಎರಡೂ ಬದಿಗಳಲ್ಲಿ ಬೃಹತ್ ಮರಗಳು, ಬಿಸಿಗಾಲದಲ್ಲಿಯೂ ತಂಪಾದ ಗಾಳಿ ಬೀಸುವ ಅನುಭವ, ಮರಗಳ ಕೆಳಗಡೆ ಕೆಲ ಹೊತ್ತು ನಿಂತರೆ ಮನಸ್ಸಿಗೆ ಹಿತ ಹಾಗೂ ಸುಂದರ ಪ್ರಕೃತಿಯ ಸೊಗಸು ಕಣ್ತುಂಬಿಕೊಂಡ ಖುಷಿ.

ಇದು ಜಿಲ್ಲಾಕೇಂದ್ರ ಕೊಪ್ಪಳದಿಂದ ಕುಷ್ಟಗಿಗೆ ಹೋಗುವ ಮಾರ್ಗದಲ್ಲಿ ಕಂಡುಬರುವ ಚಿತ್ರಣ. ಈಗಿನ ಮಳೆಗಾಲದ ಸಮಯದಲ್ಲಿ ಹಸಿರಿನಿಂದ ಹೊದ್ದಿರುವ ಮರಗಳು ಕಣ್ಣಿಗೆ ಆನಂದ ನೀಡುತ್ತಿವೆ. ಕುಷ್ಟಗಿ ಮಾರ್ಗದಿಂದ ಕೊಪ್ಪಳಕ್ಕೆ ಬರುವ ಜನರಿಗೆ ಮರಗಳೇ ರಸ್ತೆಗುಂಟ ತೋರಣ ಕಟ್ಟಿದಂತೆ ಭಾಸವಾಗುತ್ತವೆ.

ಅರಣ್ಯ ಇಲಾಖೆ, ವಿವಿಧ ಕಂಪನಿಗಳು, ಸಂಘಸಂಸ್ಥೆಗಳು, ಸಾಮಾಜಿಕ ಹೊಣೆಗಾರಿಕೆ ಹೀಗೆ ವಿವಿಧ ಕಡೆಯಿಂದ ಹಲವು ವರ್ಷಗಳ ಹಿಂದೆ ಸಸಿಯಾಗಿದ್ದ ಇವು ಈಗ ಬೃಹತ್ ಮರಗಳಾಗಿವೆ. ಸಮೀಪದಲ್ಲಿಯೇ ಹೊಲಗಳಿದ್ದು ಬಿಸಿಲು ಕಾಲದಲ್ಲಿ ಝಳಕ್ಕೆ ಬೆಂದು ಹೋದ ಜನ ಕೆಲ ಹೊತ್ತು ಈ ಮರಗಳ ಕೆಳಗಡೆ ಕುಳಿತು ವಿಶ್ರಾಂತಿ ಪಡೆದು ದೇಹವನ್ನೂ ತಂಪು ಮಾಡಿಕೊಳ್ಳುತ್ತಾರೆ. ಇಲ್ಲಿನ ಗಂಜ್ ವೃತ್ತದ ಸಮೀಪದಲ್ಲಿರುವ ಸೇತುವೆ ಇಳಿದು ಕುಷ್ಟಗಿಗೆ ತೆರಳುವ ಮಾರ್ಗದಲ್ಲಿ ನಡೆದರೆ ಈ ಮರಗಳು ಕಾಣಸಿಗುತ್ತವೆ. ಕೆಲವು ಮರಗಳು ಬೃಹತ್ ಆಗಿ ಬೆಳೆದು ನಿಂತರೆ, ಇನ್ನೂ ಕೆಲ ಮರಗಳು ಬೆಳೆಯುವ ಹಂತದಲ್ಲಿದೆ. ಹಲವು ವರ್ಷಗಳ ಹಿಂದೆ ಪಟ್ಟ ಶ್ರಮ ಈಗ ನೆರಳು ಹಾಗೂ ತಂಪಿನ ರೂಪದಲ್ಲಿ ಹೊರಹೊಮ್ಮುತ್ತಿದೆ.

ಕೊಪ್ಪಳದ ಬಹಳಷ್ಟು ಬಡಾವಣೆಗಳಲ್ಲಿ ವಿವಿಧ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ಅನುದಾನದಡಿ ಮರಗಳನ್ನು ಬೆಳೆಸುತ್ತಿದ್ದಾರೆ. ಜಿಲ್ಲಾಕೇಂದ್ರದ ಸುತ್ತಮುತ್ತಲು ಸಾಕಷ್ಟು ಸಂಖ್ಯೆಯಲ್ಲಿ ಕಾರ್ಖಾನೆಗಳಿರುವ ಕಾರಣ ಮಾಲಿನ್ಯವೂ ಹೆಚ್ಚು. ಬಸ್ ನಿಲ್ದಾಣದಿಂದ ಹಳೆ ಆರ್ಟಿಒ ಕಚೇರಿಗೆ ಹೋಗುವ ಮಾರ್ಗ, ಹೂವಿನಾಳ ರಸ್ತೆ ಹೀಗೆ ಅನೇಕ ಕಡೆ ಮರಗಳನ್ನು ಕಂಡುಬರುತ್ತಿವೆ.

429 ಹೆಕ್ಟೇರ್: ಇಲ್ಲಿನ ಅರಣ್ಯ ಇಲಾಖೆಯಿಂದ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ 429 ಹೆಕ್ಟೇರ್ನಲ್ಲಿ ನೆಡುತೋಪುಗಳಲ್ಲಿ ಸಸಿಗಳನ್ನು ನೆಡಲಾಗಿದೆ. 2023–24ರಲ್ಲಿ 183 ಹೆಕ್ಟೇರ್ನಲ್ಲಿ 43,140 ಹಾಗೂ 246 ಹೆಕ್ಟೇರ್ನಲ್ಲಿ 54,480 ಸೇರಿ ಒಟ್ಟು 97,620 ಹೆಕ್ಟೇರ್ ಪ್ರದೇಶದಲ್ಲಿ ಮರಗಳನ್ನು ಬೆಳೆಸಲು ಇಲಾಖೆ ಕ್ರಮ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕುಷ್ಟಗಿ ರಸ್ತೆಯಲ್ಲಿ ಸಂಚರಿಸುವುದು ಸದಾ ಖುಷಿ ನೀಡುತ್ತದೆ. ಅದರಲ್ಲಿಯೂ ರಸ್ತೆ ಮಾರ್ಗದಲ್ಲಿ ಸಿಗುವ ಗಾಳಿ ಮನಸ್ಸಿಗೂ ಮುದ ನೀಡುತ್ತದೆ.
– ಬಸಪ್ಪ ಕಾಮನೂರು, ರೈತ

ಕೊಪ್ಪಳ–ಕುಷ್ಟಗಿ ಮಾರ್ಗದಲ್ಲಿ ಸಾಕಷ್ಟು ಮರಗಳನ್ನು ಬೆಳೆಸಲಾಗಿದೆ. ಆಕರ್ಷಣೀಯವೂ ಆಗಿವೆ. ಬೇರೆ ಕಡೆ ಸಸಿ ನೆಡಲಾಗಿದ್ದು ಅಲ್ಲಿಯೂ ಮರಗಳ ನಿರ್ವಹಣೆಗೆ ಆದ್ಯತೆ ಕೊಡಬೇಕು.
– ಶಿವಕುಮಾರ್ ಪಾಟೀಲ, ಕೊಪ್ಪಳ

25 ಸಾವಿರ ಸಸಿ ನೆಡುವ ಕಾರ್ಯಕ್ರಮ ಇಂದು

ಕೊಪ್ಪಳ: ಇಲ್ಲಿನ ಗವಿಮಠದ ವೃಕ್ಷ ದಾಸೋಹದಡಿಯಲ್ಲಿ ಅನೇಕ ಕೆರೆ-ಹಳ್ಳ ದಂಡೆಗಳ ಮೇಲೆ ಗಿಡಗಳನ್ನು ನೆಡಲಾಗಿದ್ದು ಈಗ ಗುರುವಾರ ವಿಶ್ವ ಪರಿಸರ ದಿನದ ಅಂಗವಾಗಿ ಗವಿಸಿದ್ಧೇಶ್ವರ ಗುರುಕುಲ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ 25 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ಲಭಿಸಲಿದೆ. ಗವಿಮಠ ರಾಜ್ಯ ಅರಣ್ಯ ಇಲಾಖೆ ಕೃಷಿ ಇಲಾಖೆ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ 45 ಎಕರೆ ಭೂಪ್ರದೇಶದಲ್ಲಿ 2 ಕಿಲೋ ಮೀಟರ್ ಉದ್ದ 12 ಅಡಿ ಅಗಲದಲ್ಲಿ ‘ಮಿಯಾವಾಕಿ’ ವಿಧಾನ ಅನುಸರಿಸಿ ಕಾಯಾ ಬೇವು ಬನ್ನಿ ಹಲಸು ಆಲದಮರ ಅರಳಿಮರ ಬಿದಿರು ಹೊಂಗೆ ನೇರಳೆಹಣ್ಣು ಪಾರಿಜಾತ ತೇಗ ಹೊಳೆಮತ್ತಿ ಗುಲ್ಮೊಹರ್ ಕದಂಬ ಮಾವು ತಬುಬಿಯಾ ಜಕರಂಡಾ ಮಹಾಘನಿ ಅಂಟವಾಳಕಾಯಿ ಈ ರೀತಿ ಇತರೆ 60 ಬಗೆಯ 25000ಕ್ಕೂ ಅಧಿಕ ಸಸಿಗಳನ್ನು ನೆಡಲಾಗುತ್ತದೆ.

‘ಮಿಯಾವಾಕಿ’ ವಿಧಾನ ಎಂದರೇನು?

ಹೆಸರಾಂತ ಸಸ್ಯಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಪ್ರತಿ ಚದರ ಮೀಟರ್ಗೆ 3–4 ಸಸಿಗಳನ್ನು ನೆಟ್ಟು ದಟ್ಟವಾಗಿ ಬೆಳೆಸಿ ಅರಣ್ಯೀಕರಣ ಮಾಡಿದ್ದಾರೆ. ಈ ಮಾದರಿಯಲ್ಲಿ ಸಸಿ ನೆಟ್ಟರೆ ಸಾಂಪ್ರದಾಯಿಕ ಕಾಡುಗಳಿಗಿಂತ 10 ಪಟ್ಟು ವೇಗವಾಗಿ ಬೆಳೆಯುತ್ತವೆ 100 ಪಟ್ಟು ಹೆಚ್ಚು ಜೀವ ವೈವಿಧ್ಯತೆಯನ್ನು ಸಂರಕ್ಷಿಸುತ್ತದೆ ಮತ್ತು 40 ಪಟ್ಟು ಹೆಚ್ಚು ಇಂಗಾಲವನ್ನು ಹೀರಿಕೊಂಡು ಅತಿ ಹೆಚ್ಚು ಆಮ್ಲಜನಕವನ್ನು ಹೊರಬಿಡುತ್ತವೆ. ಗಿಡಗಳ ನಡುವಿನ ಅಂತರ ಕಡಿಮೆ ಇರುವುದರಿಂದ ಒಂದು ಸಸ್ಯ ಇನ್ನೊಂದು ಸಸ್ಯದ ಜೊತೆಗೆ ಸೂರ್ಯನ ಬೆಳಕಿಗಾಗಿ ಸ್ಪರ್ಧೆ ಏರ್ಪಟ್ಟು ಅವುಗಳೆಲ್ಲಾ ಅತ್ಯಂತ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಆದ್ದರಿಂದ ಇದು ಮಿಯಾವಾಕಿ ವಿಧಾನವೆಂದು ಹೆಸರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.