ಯಲಬುರ್ಗಾ: ಪಟ್ಟಣದ ಈಶ್ವರಿ ವಿದ್ಯಾಲಯದಲ್ಲಿ ಬ್ರಹ್ಮಬಾಬಾ ಅವರ 57ನೇ ಸ್ಮೃತಿ ದಿನಾಚರಣೆ ಕಾರ್ಯಕ್ರಮ ನಡೆಯಿತು.

ನೇತೃತ್ವ ವಹಿಸಿದ್ದ ಸಂಚಾಲಕಿ ಗೀತಾ ಅಕ್ಕ ಮಾತನಾಡಿ, ‘ವಜ್ರದ ದೊಡ್ಡ ವ್ಯಾಪಾರಿಯಾಗಿದ್ದ ದಾದಾ ಲೇಖರಾಜ ಅವರು ಆಧ್ಯಾತ್ಮದ ಅನೇಕ ಉಪನ್ಯಾಸಗಳು, ಪುಸ್ತಕಗಳನ್ನು ಅಧ್ಯಯನ ಮಾಡಿ ಜೀವನದ ನಿಜ ಸಂಗತಿಗಳನ್ನು ಅರಿತು ಬದುಕನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡರು. ವಿಶ್ವದಲ್ಲಿ ಆಧ್ಯಾತ್ಮ ಮತ್ತು ದೇವರ ಸನ್ನಿಧಿಯ ಮಹತ್ವದ ಬಗ್ಗೆ ಸಂದೇಶ ಸಾರುತ್ತಾ ಶ್ರೇಷ್ಠ ಪುರುಷರಾಗಿ ಗುರುತಿಸಿಕೊಂಡಿದ್ದಾರೆ. ಜ್ಞಾನ ಮತ್ತು ರಾಜಯೋಗಗಳ ಮೂಲಕ ಜೀವನವನ್ನು ಸನ್ಮಾರ್ಗದತ್ತ ಒಯ್ಯುವ ಸಂದೇಶಗಳನ್ನು ಸಾರಿದ ಕೀರ್ತಿ ಬಾಬಾ ಅವರಿಗೆ ಸಲ್ಲುತ್ತದೆ’ ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿ, ವಿದ್ಯಾಲಯದಲ್ಲಿ ನಿತ್ಯ ಪ್ರವಚನಗಳು, ಬೋಧನೆಗಳು ಇಲ್ಲಿಯ ಜನರ ಮನಪರಿವರ್ತನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿವೆ. ಈಶ್ವರಿ ವಿದ್ಯಾಲಯದಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸುವ ಅನೇಕ ಸದಸ್ಯರು ನೆಮ್ಮದಿಯನ್ನು ಕಂಡುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪ್ರಮುಖರಾದ ಸಿದ್ದಯ್ಯ ಕೊಣ್ಣೂರು, ಪ್ರೊ.ಎ.ಬಿ.ಕೆಂಚರೆಡ್ಡಿ, ಚಂದ್ರು ಮಸಬಹಂಚಿನಾಳ, ಶರಣಬಸಪ್ಪ ಸೇರಿ ಅನೇಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.