ಯಲಬುರ್ಗಾ: ಕಳೆದ ನವೆಂಬರ್ ತಿಂಗಳಲ್ಲಿ ತಾಲ್ಲೂಕಿನ ಮದ್ಲೂರು ಗ್ರಾಮದ ಬಳಿ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ತಜ್ಞ ವೈದ್ಯ ಶಿವಕುಮಾರ.ಬಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದರು. ಆರೋಪಿಗಳ ವೈದ್ಯಕೀಯ ಪರೀಕ್ಷೆಯಲ್ಲಿ ಸಂಗ್ರಹಿಸಿದ್ದ ವಸ್ತುಗಳ ಮೇಲೆ ವೈದ್ಯಾಧಿಕಾರಿ ಶಿವಕುಮಾರ ಅವರು ಸಹಿ ಮಾಡದೆ ಸಹಾಯಕ ಸಿಬ್ಬಂದಿಯಿಂದ ಸಹಿ ಮಾಡಿಸಿ ಗೊಂದಲ ಸೃಷ್ಟಿಸಿದ್ದಾರೆ. ಈ ಕುರಿತು ಸ್ಪಷ್ಟನೆ ಕೇಳಿದರೂ ಸರಿಯಾಗಿ ಉತ್ತರಿಸಿಲ್ಲ.

ಸಂಗ್ರಹಿಸಿದ್ದ 16 ವಸ್ತುಗಳ ಮೇಲಿನ ಡಿಎನ್ಎ ಗುರುತು ಹಾಗೂ ಇತರ ಸಾಕ್ಷಿ ಇಲ್ಲದಂತೆ ಮಾಡಿ ಕೇವಲ ಪತ್ರ ವ್ಯವಹಾರ ನಡೆಸಿ ಆರೋಪಿಗಳಿಗೆ ಸಹಾಯ ಮಾಡಿದ್ದು ಕರ್ತವ್ಯ ಲೋಪವಾಗಿದೆ ಎಂದು ಎಫ್ಐಆರ್ ನಲ್ಲಿ ದೂರಿದ್ದಾರೆ.

ಸಾಮೂಹಿಕ ಅತ್ಯಾಚಾರದಂತಹ ಸೂಕ್ಷ್ಮ ಪ್ರಕರಣದಲ್ಲಿ ವೈದ್ಯಾಧಿಕಾರಿ ನಡೆದುಕೊಂಡ ನಡೆಯು ವಿವಿಧ ಕಾಯ್ದೆ ಅಡಿಯಲ್ಲಿ ಕಾನೂನು ಬಾಹೀರವಾಗಿದೆ. ಕರ್ತವ್ಯಲೋಪ ಎಸಗಿದ್ದಲ್ಲದೇ ಮಾಹಿತಿ ಕೇಳಿದರೆ ಉದ್ಧಟನ ಮೆರೆದಿದ್ದಾರೆ. ಎಂದು ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.