ಜಿ.ಪಂ. ಕ್ಷೇತ್ರ: ಮೀಸಲಾತಿ ಪ್ರಕಟ

ಕೊಪ್ಪಳ: ಇಲ್ಲಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಸರ್ಕಾರ ಕರಡು ಪಟ್ಟಿ ಬಿಡುಗಡೆ ಮಾಡಿದೆ.
ಜಿ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಏಪ್ರಿಲ್‌ನಲ್ಲಿ ಕೊನೆಗೊಂಡಿದೆ. 2011 ರ ಜನಗಣತಿ ಆಧಾರದ ಮೇಲೆ ಜಿಲ್ಲೆಯಲ್ಲಿ 29 ಕ್ಷೇತ್ರಗಳನ್ನು ರಚಿಸ ಲಾಗಿತ್ತು. ಆ ಸಂಖ್ಯೆಯನ್ನು 34ಕ್ಕೆ ಏರಿಸುವಂತೆ ಆಯೋಗ ಸೂಚಿಸಿತ್ತು. ಅದರನ್ವಯ ಹೊಸ ಕ್ಷೇತ್ರಗಳನ್ನು ರಚಿಸಿ ಎಲ್ಲ ಕ್ಷೇತ್ರಗಳಿಗೆ ಮೀಸಲಾತಿ ನಿಗದಿ ಮಾಡಲಾಗಿದೆ.
34 ಸ್ಥಾನಗಳಲ್ಲಿ ಶೇ 50 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸ ಲಿರಿಸಲಾಗಿದೆ. 16 ಸಾಮಾನ್ಯ, 2 ಹಿಂದುಳಿದ ವರ್ಗ ಅ, 11, ಎಸ್.ಸಿ ಹಾಗೂ 3 ಕ್ಷೇತ್ರಗಳು ಬಿ.ಸಿ.ಎಂ ಗೆ ಮೀಸಲಾಗಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.