ಕುಷ್ಟಗಿ: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿನ ಮಾರುತೇಶ್ವರ ದೇವಸ್ಥಾನದ ಕಾರ್ತಿಕೋತ್ಸವ ಸೋಮವಾರ ಸಂಭ್ರಮದಿಂದ ನೆರವೇರಿತು.

ಮಾರುತೇಶ್ವರ ಮೂರ್ತಿಗೆ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಅಲಂಕಾರ, ನೈವೇದ್ಯ ಹಾಗೂ ಮಹಾಮಂಗಳಾರತಿ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ, ಭಕ್ತಿಯಿಂದ ನೆರವೇರಿದವು.

ನಂತರ ಕನಕದಾಸ ವೃತ್ತದ ಬಳಿ ಇರುವ ಮಲ್ಲಿಕಾರ್ಜುನ ದೇವಸ್ಥಾನದಿಂದ ದೇವಸ್ಥಾನದ ಮೆರವಣಿಗೆ ಮೂಲಕ ತಂದ ಕಳಸವನ್ನು ಆರೋಹಣ ಮಾಡಲಾಯಿತು. ಕಳಸ ಹಿಡಿದ ಮಹಿಳೆಯರು ವಿವಿಧ ವಾಧ್ಯ ಮೇಳದ ಕಲಾವಿದರು ಹಾಗೂ ಡಾ.ಅಂಬೇಡ್ಕರ್ ನಗರದ ಭಕ್ತರು ಮೆರವಣಿಗೆಯಲ್ಲಿದ್ದರು. ನಂತರ ನಡೆದ ದೀಪೋತ್ಸವದಲ್ಲಿ ಭಕ್ತರು ಭಾವಹಿಸಿದ್ದರು.

ಸಂಜೆ ಕಲಾವಿದ ದುರಗಪ್ಪ ಹಿರೇಮನಿ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಕೆ.ಶರಣಪ್ಪ, ದೇವಸ್ಥಾನಕ್ಕೆ ಭೇಟಿ ನೀಡಿ ಮಾರುತೇಶ್ವರನ ದರ್ಶನ ಪಡೆದದರು.

ಪ್ರಮಖರಾದ ಕಟ್ಟೆಪ್ಪ ಹಿರೇಮನಿ, ಕಂಟೆಪ್ ಮಾಸ್ತರ್, ಶರಣಪ್ಪ ಗುಮಗೇರಿ, ಶೇಖಪ್ಪ ಮ್ಯಾಗೇರಿ, ಹನುಮಂತಪ್ಪ ವೆಂಕಟಾಪುರ, ಪುರಸಭೆ ಸದಸ್ಯ ಚಂದ್ರಶೇಖರ ಹಿರೇಮನಿ, ಬಾಬೂಸಾಬ ಆನೇಹೊಸೂರು, ತಾಜುದ್ದೀನ್ ದಳಪತಿ, ರಾಮಣ್ಣ ಇಂಗಳಗಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.