ಸೋಮವಾರ, ಜನವರಿ 27, 2020
22 °C

ಸಿದ್ದರಾಮಯ್ಯಗೆ ಕಾಮನ್‌ಸೆನ್ಸ್ ಇಲ್ಲ: ಈಶ್ವರಪ್ಪ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಮನ್ ಸೆನ್ಸೇ ಇಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದರು.

ನಗರದಲ್ಲಿ ಅವರು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದರು.

ತುಮಕೂರು ಸಿದ್ದಗಂಗಾ ಮಠದಲ್ಲಿ ಪ್ರಧಾನಿ ಮೋದಿ ಕೊಳಕು ರಾಜಕೀಯ ಭಾಷಣ ಮಾಡಿದ್ದಾರೆ. ಸರ್ವರೂ ಗೌರವಿಸುವ ಪವಿತ್ರ ಸ್ಥಳದಲ್ಲಿ ಮೋದಿ ರಾಜಕೀಯ ಮಾತನಾಡಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಅವರರಿಗೆ ಹೇಗೆ ಮಾತನಾಡಬೇಕು. ಯಾವ ಪದ ಬಳಸಬೇಕು ಎಂಬ ಜ್ಞಾನವಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ನೆರೆ ಪರಿಣಾಮ ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ. ಕೇಂದ್ರದ ಬಳಿ ಪರಿಹಾರ ಕೇಳುವುದು ತಪ್ಪಲ್ಲ. ಹಣ ಕೊಡಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ರೀತಿ ಮಾತನಾಡುವುದು ಸರಿಯಲ್ಲ. ಅವರು ಮುಖ್ಯಮಂತ್ರಿಯಾಗಿದ್ದರು, ಕೇಂದ್ರದಲ್ಲಿಯೂ ಅವರದೇ ಸರ್ಕಾರವಿತ್ತು. ಅವರು ಆಗ ಎಷ್ಟು ಹಣ ತಂದಿದ್ದರು ಎಂದು ಪ್ರಶ್ನಿಸಿದರು.

ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಕಪಾಲಿಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.  ಜಮೀನು ಯಾರದು ಎಂಬುದು ಮೊದಲು ನಿರ್ಧಾರವಾಗಲಿ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು