ಮಂಡ್ಯ: ನಾಗ್ಪುರದಲ್ಲಿ ಅ.24 ಮತ್ತು 25 ರಂದು ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆಗೆ ಮಂಡ್ಯ ಜಿಲ್ಲೆಯ 137 ಜನರು ಬಸ್‌ನಲ್ಲಿ ನಗರದಿಂದ ಭಾನುವಾರ ತೆರಳಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ಯಾತ್ರೆ ಆಯೋಜನೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್ ‘ಕರ್ನಾಟಕದಿಂದ ಎಲ್ಲಾ ಜಿಲ್ಲೆಗಳಿಂದಲೂ ಯಾತ್ರಾರ್ಥಿಗಳು ನಾಗ್ಪುರಕ್ಕೆ ತೆರಳುತ್ತಿದ್ದಾರೆ. ಮಂಡ್ಯ ಜಿಲ್ಲೆಯಿಂದ ತೆರಳಲು ಒಟ್ಟು 177 ಅರ್ಜಿ ಬಂದಿದ್ದವು. ಅದರಲ್ಲಿ ಕೆಎಸ್‌ಆರ್‌ಟಿಸಿಯ ನಾಲ್ಕು ರಾಜಹಂಸ ಬಸ್‌ಗಳಲ್ಲಿ 137 ಜನರನ್ನು ಕಳುಹಿಸಲಾಗುತ್ತಿದೆ’ ಎಂದರು.
ಕೆ.ಆರ್.ಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ್, ಮಂಡ್ಯ ತಾಲ್ಲೂಕು ಸಹಾಯಕ ನಿರ್ದೇಶಕ ಮಲ್ಲೇಶ್, ಮುಖಂಡರಾದ ಕೃಷ್ಣ, ಪೂರ್ಣಚಂದ್ರ, ತೊಳಲಿ ಕೃಷ್ಣಮೂರ್ತಿ, ಗಂಗಾಧರ್ ಮೂರ್ತಿ, ವ್ಯವಸ್ಥಾಪಕ ಈಶ್ವರ್ ಪ್ರಸಾದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.