ಮದ್ದೂರು: ಪಟ್ಟಣದ ಶಿಂಷಾ ನದಿಯ ತಟದಲ್ಲಿರುವ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂದೆ ಹರಿಯುವ ನದಿಯಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದೆ.
3 ಆನೆಗಳು, ಒಂದು ಆನೆಮರಿ ದೇವಸ್ಥಾನದ ಮುಂದೆ ಹರಿಯುವ ಶಿಂಷಾ ನದಿಯ ನೀರಿನಲ್ಲಿತ್ತು ಇದನ್ನು ಕಂಡು ಅಕ್ಕಪಕ್ಕದ ರೈತರು,ದೇವಸ್ಥಾನ ಪ್ರಧಾನ ಅರ್ಚಕ ಪ್ರದೀಪ್ ಆಚಾರ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ನೀಡಿ ದರು.
ರಾಮನಗರ ಜಿಲ್ಲೆಯ ತೆಂಗನಕಲ್ಲು ಅರಣ್ಯ ಪ್ರದೇಶದ ಕಡೆಯಿಂದ ರಾತ್ರಿ ಬಂದಿರಬಹುದು. ಸ್ಥಳದಲ್ಲೇ ಬೀಡುಬಿಟ್ಟ ಅರಣ್ಯ ಇಲಾಖೆಯ ಸಿಬ್ಬಂದಿ ಮದ್ದೂರು ಪಟ್ಟಣಕ್ಕೆ ಹಾಗೂ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ ಕಡೆಗೆ ಗಜಪಡೆ ತೆರಳದಂತೆ ಸಂಜೆಯವರೆಗೂ ಕಾವಲು ಕಾದರು. ಸಂಜೆಯ ನಂತರ ಆನೆಗಳನ್ನು ಓಡಿಸಲು ಹರಸಾಹಸ ಪಟ್ಟರು.