ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಗೂರು | ಕಬ್ಬಿಣದ ರಾಡು ಬಿದ್ದು ಬಾಲಕ ಸಾವು

Published 2 ಮೇ 2024, 14:18 IST
Last Updated 2 ಮೇ 2024, 14:18 IST
ಅಕ್ಷರ ಗಾತ್ರ

ಹಲಗೂರು: ಸಮೀಪದ ಕಂಸಾಗರ ಗ್ರಾಮದಲ್ಲಿ ಬುಧವಾರ ಮಹದೇಶ್ವರ ದೇವಸ್ಥಾನದ ಚಾವಣಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮೇಲಿನಿಂದ ಕಬ್ಬಿಣದ ರಾಡು ಬಿದ್ದು, ಕೆಳಗೆ ನಿಂತಿದ್ದ ಬಾಲಕ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ಮೈಸೂರಿನ ಗೌಸಿಯಾ ನಗರ ನಿವಾಸಿ ಕಲಿಂ ಪಾಷಾ ಅವರ ಪುತ್ರ ಮಹಮದ್ ಪಾಷಾ (15) ಮೃತಪುಟ್ಟ ಬಾಲಕ.

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದ ಮಹಮದ್ ತನ್ನ ಚಿಕ್ಕಪ್ಪರಾದ ಮುಕ್ರಂ ಅಹಮದ್ ಮತ್ತು ಇಕ್ರಂ ಅಹಮದ್ ಅವರನ್ನು ನೋಡಿಕೊಂಡು ಹೋಗಲು ಕಂಸಾಗರ ಗ್ರಾಮಕ್ಕೆ ಬಂದಿದ್ದನು. ವೆಲ್ಡಿಂಗ್ ಮಾಡುತ್ತಿದ್ದಾಗ ಕಬ್ಬಿಣ ರಾಡು ಆಕಸ್ಮಿಕವಾಗಿ ಜಾರಿ ಕೆಳಗೆ ನಿಂತಿದ್ದ ಮಹಮದ್ ಪಾಷಾ ತಲೆಗೆ ಬಡಿದಿದೆ. ತೀವ್ರ ಗಾಯಗೊಂಡ ಬಾಲಕನನ್ನು ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT