ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲೇ ಅತೀ ಹೆಚ್ಚು ಸೀಳುದುಟಿ, ವಸಡು ಶಸ್ತ್ರಚಿಕಿತ್ಸೆ

Last Updated 28 ಜನವರಿ 2020, 15:22 IST
ಅಕ್ಷರ ಗಾತ್ರ

ನಾಗಮಂಗಲ: ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಅಮೆರಿಕದ ರೋಟಾಪ್ಲಾಸ್ಟ್‌ ಇಂಟರ್‌ನ್ಯಾಷನಲ್‌ ಸಹಯೋಗದಲ್ಲಿ ಕಳೆದ 7 ವರ್ಷಗಳಲ್ಲಿ ದೇಶದಲ್ಲೇ ಅತೀಹೆಚ್ಚು ಸೀಳುತುಟಿ, ವಸಡು ಶಸ್ತ್ರಚಿಕಿತ್ಸೆ ನಡೆಸಿದೆ ಎಂದು ಸಂಸ್ಥೆಯ ಪ್ರಾಚಾರ್ಯ ಡಾ.ಎಂ.ಜಿ.ಶಿವರಾಮು ಹೇಳಿದರು.

ಮಂಗಳವಾರ ಕಾಲೇಜಿನ ಆವರಣದಲ್ಲಿ ಆರಂಭವಾದ 8ನೇ ವರ್ಷದ ಸೀಳುತುಟಿ – ವಸಡು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದ ಅವರು, ‘2006ರಿಂದ ಇಲ್ಲಿಯವರೆಗೆ ನಡೆದ ಶಿಬಿರಗಳಲ್ಲಿ ಮಕ್ಕಳು ಹಾಗೂ ವಯಸ್ಕರು ಸೇರಿದಂತೆ 762 ಜನರಿಗೆ ಸೀಳುತುಟಿ–ವಸಡು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ವರ್ಷ ಅಮೆರಿಕದ ರೋಟಾಪ್ಲಾಸ್ಟ್‌ ಇಂಟರ್‌ನ್ಯಾಷನಲ್‌ನ 25 ವೈದ್ಯರ ತಂಡ ಬಂದಿದ್ದು, ನಮ್ಮ ವೈದ್ಯರೊಂದಿಗೆ ಅವರು ಫೆ.6ರವರೆಗೆ ಕಾರ್ಯನಿರ್ವಹಿಸಲಿದೆ’ ಎಂದು ಹೇಳಿದರು.

‘ಈ ವರ್ಷ 146 ಮಂದಿ ಶಸ್ತ್ರಚಿಕಿತ್ಸೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಅವರನ್ನು ಪರೀಕ್ಷಿಸಿ, ಶಸ್ತ್ರಚಿಕಿತ್ಸೆಗೆ ಅರ್ಹರಾಗುವ 80 ಮಂದಿಯನ್ನು ಆಯ್ಕೆ ಮಾಡಲಾಗುವುದು. ಒಂದೇ ಶಿಬಿರದಲ್ಲಿ ಇಷ್ಟೊಂದು ಜನರಿಗೆ ಶಸ್ತ್ರಚಿಕಿತ್ಸೆ ಮಾಡುತ್ತಿರುವುದು ದೇಶದಲ್ಲೇ ಇದೇ ಮೊದಲು. ಈ ಸಾಧನೆ ಲಿಮ್ಕಾ ಬುಕ್‌ ಆಫ್‌ ವರ್ಡ್ಲ್‌ ರೆಕಾರ್ಡ್‌ಗೆ ನೋಂದಣಿಯಾಗಿದ್ದು ಪ್ರಮಾಣ ಪತ್ರ ದೊರೆಯುವ ಸಾಧ್ಯತೆ ಇದೆ’ ಎಂದು ಹೇಳಿದರು.

‘ಈ ಬಾರಿಯ ಶಿಬಿರದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಒಡಿಶಾದ ಮಕ್ಕಳು ಹಾಗೂ ವಯಸ್ಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಹೆಚ್ಚಿನ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಅಮೆರಿಕದ ವೈದ್ಯರು ಸೇವೆ ಎಂದು ಭಾವಿಸಿ ಚಿಕಿತ್ಸೆ ನೀಡುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT