ಶ್ರೀರಂಗಪಟ್ಟಣ: ಅಂಬರೀಷ್ ಅವರ ಜನ್ಮದಿನದ ನಿಮಿತ್ತ ಅವರ ಕಟೌಟ್ಗೆ ಅಭಿಮಾನಿಗಳು ಗುರುವಾರ ಕ್ಷೀರಾಭಿಷೇಕ ಮಾಡಿದರು.

ಪಟ್ಟಣದ ಕುವೆಂಪು ವೃತ್ತದಲ್ಲಿ ಅಂಬರೀಷ್ ಕಟೌಟ್ಗೆ ಹತ್ತು ಲೀಟರ್ ಹಾಲಿನಿಂದ ಕ್ಷೀರಾಭಿಷೇಕ ನಡೆಯಿತು. ಅಭಿಮಾನಿಗಳು ಸರದಿಯಂತೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ತಮ್ಮ ನೆಚ್ಚಿನ ನಟನ ಪರ ಸಾಲು ಸಾಲು ಘೋಷಣೆ ಕೂಗಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು.

‘ಅಂಬರೀಷ್ ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಪ್ರಮುಖ ಯೋಜನೆಗೆ ಅಂಬರೀಶ್ ಅವರ ಹೆಸರಿಟ್ಟು ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಬೇಕು’ ಎಂದು ಅಂಬರೀಶ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಎಸ್.ಎಲ್. ಲಿಂಗರಾಜು ಒತ್ತಾಯಿಸಿದರು.

ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಟಿ.ಎಂ. ಹೊಸೂರು ಮಹೇಶ್, ಸುನಿಲ್ಕುಮಾರ್, ತಮ್ಮಣ್ಣ, ಎಂ.ಜೆ.ಪುಟ್ಟರಾಜು, ಕುಬೇರಪ್ಪ, ಚಂದ್ರು, ಸಿ. ಸ್ವಾಮಿಗೌಡ, ಶಿವರಾಂ, ಶಂಕರಬಾಬು, ಗೋಪಾಲಗೌಡ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.