ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳವಳ್ಳಿ | ಬೆಂಕಿ: ಅಡಿಕೆ, ತೆಂಗು ನಾಶ

Published 3 ಮಾರ್ಚ್ 2024, 12:25 IST
Last Updated 3 ಮಾರ್ಚ್ 2024, 12:25 IST
ಅಕ್ಷರ ಗಾತ್ರ

ಮಳವಳ್ಳಿ: ಶನಿವಾರ ಸಂಜೆ ತಾಲ್ಲೂಕಿನ ನಿಡಘಟ್ಟ ಗ್ರಾಮದ ಹೊರವಲಯದಲ್ಲಿ ಆಕಸ್ಮಿಕ ಬೆಂಕಿಗೆ ಬಿದ್ದು ಸುಮಾರು 3.5 ಎಕರೆ ಪ್ರದೇಶದಲ್ಲಿದ್ದ ಸಾವಿರಕ್ಕೂ ಅಧಿಕ ಅಡಿಕೆ, ತೆಂಗಿನ ಗಿಡಗಳನ್ನು ನಾಶವಾಗಿದೆ.

ಗ್ರಾಮದ ರೈತ ಮಹದೇವೇಗೌಡ ಎಂಬುವವರು ಆರೇಳು ವರ್ಷಗಳ ಹಿಂದೆ 1600 ಅಡಿಕೆ ಮತ್ತು 190 ತೆಂಗಿನ ಗಿಡಗಳನ್ನು ನೆಟ್ಟಿದ್ದರು. ಎಲ್ಲವೂ ಫಸಲು ಬಿಡುವ ಹಂತಕ್ಕೆ ಬಂದಿದ್ದವು. ತೋಟಕ್ಕೆ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣವಾಗಿ ಗಿಡಗಳು ಸುಟ್ಟು ನಾಶವಾಗಿವೆ. ವಿಷಯ ತಿಳಿದ ಆಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.

ರೈತ ಮಹದೇವೇಗೌಡ ಮಾತನಾಡಿ, ‘ಸುಮಾರು 30 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಅಡಿಕೆ ಮತ್ತು ತೆಂಗು ಬೆಳೆ ಹಾಕಿದ್ದೆ. ಆಕಸ್ಮಿಕ ಬೆಂಕಿಗೆ ಎಲ್ಲವೂ ನಾಶವಾಗಿದ್ದು, ತಾಲ್ಲೂಕು ಆಡಳಿತ ಮತ್ತು ಶಾಸಕರು ಪರಿಹಾರ ನೀಡಬೇಕು’ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT