ಮಂಡ್ಯ: ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275 ರಾಷ್ಟ್ರೀಯ ಹೆದ್ದಾರಿಯಲ್ಲಿ 2023ರಿಂದ 2025ರವರೆಗೆ ಒಟ್ಟು 1,674 ಅಪಘಾತಗಳು ನಡೆದಿದ್ದು, 215 ಮಂದಿ ಜೀವ ಕಳೆದುಕೊಂಡಿದ್ದಾರೆ. 311 ಮಂದಿಗೆ ತೀವ್ರ ಗಾಯಗಳಾಗಿವೆ.

ಬೆಂಗಳೂರು-ನಿಡಘಟ್ಟ ನಡುವೆ ವರ್ಷದಿಂದ ವರ್ಷಕ್ಕೆ ಅಪಘಾತದಲ್ಲಿ ಇಳಿಕೆ ಆಗಿದ್ದು ಜೀವಹಾನಿ ಕಡಿಮೆ ಆಗಿವೆ. ಆದರೆ, ನಿಡಘಟ್ಟ-ಮೈಸೂರು ನಡುವೆ ಅಪಘಾತದಲ್ಲಿ ಹೆಚ್ಚಳವಾಗಿದ್ದು ಸಾವಿನಲ್ಲೂ ಏರಿಕೆ ಕಂಡುಬಂದಿದೆ.

ಬೆಂಗಳೂರು-ನಿಡಘಟ್ಟ (ಪ್ಯಾಕೇಜ್ 1) ನಡುವೆ 865 ಅಪಘಾತಗಳು ನಡೆದಿದ್ದು 76 ಮಂದಿ ಪ್ರಾಣ ಹಾನಿಯಾಗಿದೆ. 185 ಮಂದಿಗೆ ತೀವ್ರ ಗಾಯಗಳಾಗಿವೆ. ನಿಡಘಟ್ಟ- ಮೈಸೂರು ( ಪ್ಯಾಕೇಜ್ 2) 809 ಅಪಘಾತಗಳು ನಡೆದಿದ್ದು 139 ಮಂದಿ ಜೀವ ತೆತ್ತಿದ್ದಾರೆ. 126 ಮಂದಿಗೆ ತೀವ್ರ ಗಾಯಗಳಾಗಿವೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಪ್ರತಿ ಗಂಟೆಗೆ 100 ಕಿ.ಮೀ.ಗೆ ಇಳಿಸಿ, ವೇಗದ ಮೇಲೆ ನಿಗಾ ಇಡಲು ಅಲ್ಲಲ್ಲಿ ಕ್ಯಾಮೆರಾ ಅಳವಡಿಸಿ ಮಿತಿ ಮೀರಿದವರಿಂದ ದಂಡ ಸಂಗ್ರಹಿಸಲಾಗುತ್ತಿದೆ. ಆದಾಗ್ಯೂ, ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖ ಆಗದಿರುವುದು ಪೊಲೀಸ್ ಇಲಾಖೆಗೆ ತಲೆ ನೋವಾಗಿದೆ.

‘ಅಪೂರ್ಣ ಕಾಮಗಾರಿ, ಸೂಚನಾ ಫಲಕಗಳ ಕೊರತೆ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ ತೊಡಕು, ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳಲ್ಲಿ ವಿಳಂಬ, ಅತಿವೇಗದ ಚಾಲನೆ, ಹೆದ್ದಾರಿಯಲ್ಲಿ ಪಥ ಬದಲಿಸುವಾಗ ಸಿಗ್ನಲ್ ನೀಡದೇ ಇರುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮುಂತಾದ ಕಾರಣಗಳಿಂದ ಅಪಘಾತಗಳು ಸಂಭವಿಸುತ್ತಿವೆ’ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.

118 ಕಿ.ಮೀ. ಉದ್ದ:

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸಿದ್ದ 118 ಕಿ.ಮೀ. ಉದ್ದದ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಮಾರ್ಚ್ನಲ್ಲಿ ಉದ್ಘಾಟಿಸಿದ್ದರು. ಬೆಂಗಳೂರಿನ ಕುಂಬಳಗೋಡಿನಿಂದ ಆರಂಭವಾಗುವ ಹೆದ್ದಾರಿಯು ರಾಮನಗರ ಜಿಲ್ಲೆಯಲ್ಲಿ 55 ಕಿ.ಮೀ. ಮಂಡ್ಯದಲ್ಲಿ 58 ಕಿ.ಮೀ. ಹಾಗೂ ಮೈಸೂರು ಜಿಲ್ಲೆಯಲ್ಲಿ 5 ಕಿ.ಮೀ. ವ್ಯಾಪಿಸಿದೆ.

ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಸರ್ವೀಸ್ ರಸ್ತೆಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು
ಮಧು ಜಿ.ಮಾದೇಗೌಡ ವಿಧಾನ ಪರಿಷತ್ ಸದಸ್ಯ

₹855 ಕೋಟಿ ಟೋಲ್ ಶುಲ್ಕ ಸಂಗ್ರಹ

ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ–275 ವಾಹನಗಳ ಸಂಚಾರಕ್ಕೆ ಮುಕ್ತವಾದ ದಿನದಿಂದ ಈವರೆವಿಗೆ ₹855.79 ಕೋಟಿ ಟೋಲ್ ಶುಲ್ಕ ಸಂಗ್ರಹ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಗ್ರಹವಾಗುತ್ತಿರುವ ಟೋಲ್ ಶುಲ್ಕ ಕುರಿತು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಲಿಖಿತ ಉತ್ತರ ನೀಡಿದ್ದಾರೆ.

ಹೆದ್ದಾರಿಯಲ್ಲಿ ಮೂರು ಟೋಲ್ ಕೇಂದ್ರಗಳಿದ್ದು 2022-23ರಿಂದ 2025-26ರ ಅವಧಿಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಿಮಿಣಿಕೆ ಕೇಂದ್ರದಲ್ಲಿ ₹282.14 ಕೋಟಿ; ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಕೇಂದ್ರದಲ್ಲಿ ₹248.42 ಕೋಟಿ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರಿನ ಕೇಂದ್ರದಲ್ಲಿ ₹325.23 ಕೋಟಿ ಟೋಲ್ ಸಂಗ್ರಹವಾಗಿದೆ.

Cut-off box - ಪ್ರವೇಶ ಮತ್ತು ನಿರ್ಗಮನದ ಸಮಸ್ಯೆ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬರಲು ಮತ್ತು ಸರ್ವಿಸ್ ರಸ್ತೆಯಿಂದ ಹೆದ್ದಾರಿ ಪ್ರವೇಶಿಸಲು ಕಿರಿದಾದ ಸ್ಥಳಾವಕಾಶ ಇದ್ದು ವಾಹನ ಚಾಲಕರು ತಬ್ಬಿಬ್ಬುಗೊಂಡು ಅಪಘಾತಗಳು ಸಂಭಿವಿಸುತ್ತಿವೆ. ಪಾಂಡವಪುರಕ್ಕೆ ಹೋಗುವವರಿಗೆ ಅನುಕೂಲವಾಗಲಿ ಎಂದು ತೂಬಿನಕೆರೆ ಬಳಿ ನಿರ್ಗಮನ ಮಾರ್ಗ ಕಲ್ಪಿಸಲಾಗಿದೆ. ಆದರೆ ನಿರ್ಗಮನ ಮಾರ್ಗ ಕಿರಿದಾಗಿದ್ದು ಅಡ್ಡಲಾಗಿ ಸಿಮೆಂಟ್ ಬ್ಲಾಕ್ಗಳನ್ನು ಇಟ್ಟಿರುವುದು ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ಇದೇ ಸ್ಥಳದಲ್ಲೇ ಏಪ್ರಿಲ್ ತಿಂಗಳಲ್ಲಿ ಕಾರು–ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಗಣಂಗೂರು ಟೋಲ್ ಪ್ಲಾಜಾ ನಂತರ ಮೈಸೂರಿನಿಂದ ಬೆಂಗಳೂರು ಕಡೆ ಹೋಗುವ ವಾಹನಗಳು ಹೆದ್ದಾರಿ ಪ್ರವೇಶಿಸದಂತೆ ತಡೆಯಲು ಪ್ರವೇಶ ದ್ವಾರ ಮುಚ್ಚಲಾಗಿದೆ. ನಿರ್ಗಮನದ ದ್ವಾರದ ಮೂಲಕ ವಾಹನಗಳು ರಿವರ್ಸ್ ಗೇರ್ನಲ್ಲಿ ಹೆದ್ದಾರಿ ಪ್ರವೇಶಿಸುತ್ತಿರುವುದರಿಂದ ರಾತ್ರಿ ವೇಳೆ ಸರ್ವಿಸ್ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ನಿತ್ಯ ಚಾಲಕರ ನಡುವೆ ಜಗಳ ಮತ್ತು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.