ಮಂಡ್ಯ: ಮೂರು ದಿನದಿಂದೀಚೆಗೆ 8 ರೋಗಿಗಳಿಗೆ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದ್ದು ಜಿಲ್ಲೆಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಇಬ್ಬರು ಮೃತಪಟ್ಟಿದ್ದಾರೆ.

ಒಟ್ಟು ಕಪ್ಪು ಶಿಲೀಂಧ್ರ ರೋಗಿಗಳಲ್ಲಿ 13 ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದವರೇ ಆಗಿದ್ದಾರೆ, ಒಬ್ಬ ಮಹಿಳೆ ಕೋವಿಡೇತರ ರೋಗಿಯಾಗಿದ್ದು ಕಪ್ಪು ಶಿಲೀಂಧ್ರ ಸೋಂಕು ಪತ್ತೆಯಾಗಿದೆ. ಅವರು ಮಧುಮೇಹ ಇರುವ ಕಾರಣ ಸೋಂಕು ಕಾಣಿಸಿಕೊಂಡಿದೆ.

ಒಬ್ಬ ಮಹಿಳೆ ಸೋಂಕಿನಿಂದ ಗುಣಮುಖರಾಗಿದ್ದು ಮನೆಗೆ ತೆರಳಿದ್ದಾರೆ. ಉಳಿದ 11 ಮಂದಿಗೆ ಮಿಮ್ಸ್ ಆಸ್ಪತ್ರೆ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ನಗರದ ಹಾಲಹಳ್ಳಿ ಬಡಾವಣೆಯ ರೋಗಿಯೊಬ್ಬರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಸೋಂಕು ತೀವ್ರಗೊಂಡ ಪರಿಣಾಮ ಅವರ ಒಂದು ಕಣ್ಣನ್ನು ತೆಗೆದು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲಾಸ್ಪತ್ರೆಯಲ್ಲಿರುವ ಒಬ್ಬ ರೋಗಿಗೆ ಸೋಂಕು ಮಿದುಳಿಗೆ ಹರಡಿದ್ದು ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಗುಣಮುಖರಾಗುತ್ತಿದ್ದಾರೆ. ಮೇ ಮೊದಲ ವಾರದಲ್ಲಿ ರಾಜ್ಯದೆಲ್ಲೆಡೆ ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡಾಗ ರೋಗ ಜಿಲ್ಲೆಯಲ್ಲೂ ಪತ್ತೆಯಾಗಿತ್ತು.

ಕೋವಿಡ್ನಿಂದ ಗುಣಮುಖರಾಗಿ ಮನೆಗೆ ತೆರಳಿ 15 ದಿನಗಳಾದ ನಂತರ ಹಲವು ರೋಗಿಗಳು ಕಪ್ಪು ಶಿಲೀಂಧ್ರದಿಂದ ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಗುರುವಾರ ಮೂವರು, ಶುಕ್ರವಾರ ನಾಲ್ವರು, ಶನಿವಾರ ಒಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರಿಗೂ ಶಸ್ತ್ರಚಿಕಿತ್ಸೆ ಅವಶ್ಯಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕಪ್ಪು ಶಿಲೀಂಧ್ರ ಸೋಂಕಿಗೆ ಪ್ರಮುಖವಾಗಿ ಕಣ್ಣು, ಮೂಗು, ಕಿವಿ (ಇಎನ್ಟಿ) ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ. ಸೋಂಕು ಕಣ್ಣಿಗೆ ತಲುಪಿದಾಗ ನೇತ್ರ ತಜ್ಞರ ಸಹಾಯ ಪಡೆಯಲಾಗುತ್ತದೆ. ಸೋಂಕು ಮಿದುಳು ತಲುಪಿದರೆ ನರರೋಗ ತಜ್ಞರ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರಿಗೆ ದವಡೆಗೂ ತಲುಪಿದ್ದು ದಂತವೈದ್ಯರ ಸಹಾಯ ಪಡೆಯಲಾಗುತ್ತದೆ.

ಪ್ರಮುಖವಾಗಿ ಇಎನ್ಟಿ ವಿಭಾಗದ ವೈದ್ಯರು ಎಲ್ಲಾ ರೋಗಿಗಳ ಚಿಕಿತ್ಸೆ ಜವಾಬ್ದಾರಿ ಹೊತ್ತಿದ್ದಾರೆ. ಮಿಮ್ಸ್ನಲ್ಲಿ ಇಎನ್ಟಿ ವಿಭಾಗ ಸುಸಜ್ಜಿತವಾಗಿದ್ದು ಅನುಭವಿ 6 ವೈದ್ಯರು ಇದ್ದಾರೆ. ಅವರ ಜೊತೆಗೆ ಅರವಳಿಕೆ ತಜ್ಞರು ಹಾಗೂ ಇತರ ವಿಭಾಗದ ವೈದ್ಯರ ಸಹಾಯದಿಂದ ಪರಿಸ್ಥಿತಿ ನಿರ್ವಹಣೆ ಮಾಡಲಾಗುತ್ತಿದೆ. ಕಳೆದ ಮೂರು ದಿನಗಳ ದಾಖಲಾತಿ ಗಮನಿಸಿದರೆ ರೋಗಿಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದೇ ವೈದ್ಯರು ತಿಳಿಸಿದ್ದಾರೆ.

‘ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರಿಗೆ ಔಷಧಿ, ಲಸಿಕೆಯಿಂದಲೇ ಚಿಕಿತ್ಸೆ ನೀಡಬೇಕಾಗಿದೆ. ಮೂರು ದಿನದಿಂದೀಚೆಗೆ 8 ಮಂದಿಯಲ್ಲಿ ಸೋಂಕು ಕಂಡು ಬಂದಿರುವ ಕಾರಣ ಮುಂದಿನ ಸವಾಲು ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಇಎನ್ಟಿ ವಿಭಾಗದ ಮುಖ್ಯಸ್ಥ ಡಾ.ರವಿ ತಿಳಿಸಿದರು.

‘ಮಳೆ ಸುರಿದಾಗ ಗೋಡೆಗೆ ಪಾಚಿ ಕಟ್ಟಿಕೊಳ್ಳುವ ರೀತಿಯಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಳ್ಳುತ್ತದೆ. ಅದು ಸಂಪೂರ್ಣವಾಗಿ ಗುಣಮುಖವಾದರೂ ಮತ್ತೆ ಕಾಣಿಸಿಕೊಳ್ಳುವ ಸಂಭವವಿರುತ್ತದೆ. ಗುಣಮುಖರಾದವರು ಮತ್ತೆ ಸೋಂಕಿತರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ’ ಎಂದು ವೈದ್ಯರು ತಿಳಿಸಿದರು.

ಪ್ರತಿದಿನ ಔಷಧ ಸರಬರಾಜು

ಕಪ್ಪು ಶಿಲೀಂಧ್ರಕ್ಕೆ ಅವಶ್ಯಕವಾಗಿರುವ ಆಂಪೊಟೆರಿಸನ್–ಬಿ ಔಷಧ, ಪೋಸ್ಕೊಹಾಸೋಲ್ ಲಸಿಕೆ ಪ್ರತಿದಿನ ಜಿಲ್ಲಾಸ್ಪತ್ರೆಗೆ ಸರಬರಾಜಾಗುತ್ತಿದೆ. ರಾಮನಗರದಲ್ಲಿರುವ ಔಷಧ ಉಗ್ರಾಣಕ್ಕೆ ಬರುತ್ತಿದ್ದು ಅಲ್ಲಿಂದ ಜಿಲ್ಲಾಸ್ಪತ್ರೆ ಸಿಬ್ಬಂದಿ ತರುತ್ತಿದ್ದಾರೆ.

‘ಆರಂಭದಲ್ಲಿ ಆಂಪೊಟೆರಿಸನ್–ಬಿ ಔಷಧ ಕೊರತೆ ಇತ್ತು. ಆದರೆ ಈಗ ಅಂತಹ ಕೊರತೆ ಇಲ್ಲ. ಪ್ರತಿದಿನ 20 ವಯಲ್ನಷ್ಟು ಔಷಧಿ ಜಿಲ್ಲಾಸ್ಪತ್ರೆಗೆ ಬರುತ್ತಿದೆ. ಈಗ ಯಾವ ರೋಗಿಗೂ ಔಷಧಿ ಕೊರತೆಯಾಗಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.