ಶನಿವಾರ, ಮೇ 8, 2021
19 °C

20 ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಓಡಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರ 3ನೇ ದಿನಕ್ಕೆ ತಲುಪಿದ್ದು ಶುಕ್ರವಾರ 40 ಸಿಬ್ಬಂದಿ ಕರ್ತವ್ಯಕ್ಕೆ ಹಾಜ ರಾದರು. 20 ಮಾರ್ಗಗಳಲ್ಲಿ ಭದ್ರತೆಯ ನಡುವೆ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡಿದವು.

3 ದಿನಗಳಿಂದ ಮೈಸೂರು, ಬೆಂಗಳೂರು ಕಡೆಗೆ ಸಾರಿಗೆ ಸಂಸ್ಥೆ ಬಸ್‌ ಇರಲಿಲ್ಲ. ಆದರೆ ಶುಕ್ರವಾರ ಮೈಸೂರಿಗೆ ಬಸ್‌ ತೆರಳಿದವು, ಇದರಿಂದ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು. ಬೆಂಗಳೂರಿಗೆ ಇನ್ನೂ ಬಸ್‌ ಸೇವೆ ಆರಂಭವಾಗಿಲ್ಲ. ಪ್ರಯಾಣಿ ಕರು ಖಾಸಗಿ ಬಸ್‌ಗಳಲ್ಲೇ ಓಡಾಟ ಮುಂದುವರಿಸಿದ್ದಾರೆ. ಬಹು ತೇಕ ಖಾಸಗಿ ಬಸ್‌ಗಳು ಬೆಂಗಳೂರಿಗೆ ಮಾತ್ರ ಹೋಗುತ್ತಿವೆ ಸಂಸ್ಥೆ ಸಿಬ್ಬಂದಿ ತಿಳಿಸಿದರು.

ನಿವೃತ್ತ ಸಿಬ್ಬಂದಿಗೆ ಮನವಿ: ಸರ್ಕಾರದ ಸೂಚನೆಯಂತೆ ನಿವೃತ್ತ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗು ವಂತೆ ಮನವಿ ಮಾಡಲಾಗಿದೆ. ಜಿಲ್ಲೆಯಲ್ಲೂ ಹಲವು ನಿವೃತ್ತ ಸಿಬ್ಬಂದಿಗೆ ಸೂಚನೆ ಕಳುಹಿಸಲಾಗಿದೆ.

‘ಹಲವು ಸಿಬ್ಬಂದಿಗೆ ಕರೆ ಮಾಡಿ ಮನವಿ ಮಾಡಲಾಗಿದೆ. ಒಂದೆರಡು ದಿನ ಸಮಯ ಕೇಳಿದ್ದಾರೆ. ಅವರು ಕರ್ತವ್ಯಕ್ಕೆ ಹಾಜರಾದರೆ ಮಾರ್ಗ ನೀಡಲಾಗುವುದು’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಕಿರಣ್‌ ಕುಮಾರ್‌ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.