ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಅಕ್ರಮಕ್ಕೆ ಸೆಸ್ಕ್‌ ಕಡಿವಾಣ

ಅವಘಡ, ಹಾನಿಗೆ ಇಲಾಖೆ ಜವಾಬ್ದಾರಿಯಲ್ಲ; ಇಇ ಹೇಮಲತಾ
Last Updated 5 ಡಿಸೆಂಬರ್ 2021, 3:37 IST
ಅಕ್ಷರ ಗಾತ್ರ

ನಾಗಮಂಗಲ: ನಾಗಮಂಗಲ ಮತ್ತು ಬೆಳ್ಳೂರು ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಬರುವ ರೈತರು ಅಕ್ರಮವಾಗಿ ವಿದ್ಯುತ್ ಪಡೆದು ಕೊಳವೆ ಬಾವಿಗಳನ್ನು ಬಳಕೆ ಮಾಡುತ್ತಿದ್ದರೆ ತಕ್ಷಣವೇ ಸಕ್ರಮ ಮಾಡಿಸಿಕೊಳ್ಳಿ ಎಂದು ನಾಗಮಂಗಲ ಸೆಸ್ಕ್ ವಿಭಾಗ ಕಚೇರಿಯ ಇಇ ಹೇಮಲತಾ ಹೇಳಿದರು.

ಪಟ್ಟಣದ ಸೆಸ್ಕ್ ವಿಭಾಗ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಾದ್ಯಂತ 800ಕ್ಕೂ ಅಧಿಕ ಸಂಖ್ಯೆಯ ಕೊಳವೆ ಬಾವಿಗಳನ್ನು ಅಕ್ರಮವಾಗಿ ಸಂಪರ್ಕ ಪಡೆದಿರುವುದು ಕಂಡು ಬಂದಿದೆ. ಆದ್ದರಿಂದ ರೈತರು ತಾವಾಗಿಯೇ ಇಲಾಖೆ ನಿಗದಿ ಮಾಡಿರುವ ದಂಡ ಮತ್ತು ಡಿ2 ಶುಲ್ಕವನ್ನು ಪಾವತಿ ಮಾಡಿ ಸಕ್ರಮ ಮಾಡಿಕೊಳ್ಳಬೇಕು. ಅಕ್ರಮವಾಗಿರುವ ಕೊಳವೆ ಬಾವಿಗಳ ಸಂಪರ್ಕವನ್ನು ರದ್ದು ಮಾಡಲು ಕ್ರಮ ವಹಿಸಲಾಗಿದೆ. ಆದ್ದರಿಂದ ರೈತರು ಪಂಪ್‍ಸೆಟ್‍ಗಳನ್ನು ಸಕ್ರಮ ಮಾಡಿಕೊಂಡು ಇಲಾಖೆಗೆ ಸಹಕಾರ ಎಂದು ತಿಳಿಸಿದರು.

ಸಕ್ರಮ ವಾಗಿರುವ ಕೊಳವೆ ಬಾವಿಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಹಲವು ಯೋಜನೆ ಯನ್ನು ಜಾರಿ ಮಾಡಲಾಗಿದೆ. ಅಗತ್ಯ ಮೂಲ ಸೌಲ ಭ್ಯಗಳಿಗೆ ಅನುದಾನಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ಜೇಷ್ಠತೆ ಅನುಸರಿಸಿ ಸವಲತ್ತು ಒದಗಿಸಲಾಗುವುದು. ಸಕ್ರಮವಾಗದ ಸಂಪರ್ಕದಲ್ಲಿ ವಿದ್ಯುತ್ ಅವಘಡಗಳೇನಾದರೂ ಜರುಗಿದರೆ ಇಲಾಖೆ ಜವಾಬ್ದಾರಿಯಲ್ಲ ಎಂದರು.

ಯಾವುದೇ ಭಾಗದಲ್ಲಿ ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋದರೆ 24 ಗಂಟೆಯೊಳಗೆ ಸರಿಪಡಿಸಲಾಗುವುದು. ರೈತರು ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೆ 24 ಗಂಟೆಯೊಳಗೆ ಬದಲಿ ಪರಿವರ್ತಕವನ್ನು ವ್ಯವಸ್ಥೆ ಮಾಡ ಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಯಾರಿಗೂ ಹಣ ನೀಡುವ ಅಗತ್ಯವಿಲ್ಲ. ಗ್ರಾಹಕರು ಪ್ರತಿ ತಿಂಗಳು ಬಿಲ್‌ ಪಾವತಿಸಬೇಕಾಗಿದ್ದು, ಎರಡು ತಿಂಗಳು ಮೀರಿದರೆ, ವಿದ್ಯುತ್ ಸಂಪರ್ಕವನ್ನು ಶಾಶ್ವತವಾಗಿ ಕಡಿತಗೊಳಿಸಲಾಗುವುದು. ವಿದ್ಯುತ್ ಬಾಕಿ ಬಿಲ್‌ ಪಾವತಿಸುವ ಜೊತೆಗೆ ಹೊಸ ಅರ್ಜಿ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಬೇಕಾಗುತ್ತದೆ ಎಂದು ಸೂಚನೆ ನೀಡಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮರಿಸ್ವಾಮಿ ಮಾತನಾಡಿ, ಪರಿವರ್ತಕಗಳು ಸುಟ್ಟು ಹೋದಾಗ ವ್ಯವಸ್ಥೆ ಮಾಡಲು ತಡವಾಗುತ್ತಿತ್ತು. ಈಗ ಇಲಾಖೆಯು ವಿದ್ಯುತ್ ಪರಿವರ್ತಕ ಕೆಟ್ಟು ಹೋದರೆ 24 ಗಂಟೆಯೊಳಗೆ ಬದಲಿ ವ್ಯವಸ್ಥೆಯನ್ನು ಮಾಡುವ ಕುರಿತು ಹೊಸ ಆದೇಶವನ್ನು ಮಾಡಲಾಗಿದೆ. ಆದ್ದರಿಂದ ಪ್ರತಿಯೊಂದು ಉಪ ವಿಭಾಗದಲ್ಲಿ ಕನಿಷ್ಠ 10 ಪರಿವರ್ತಕಗಳನ್ನು ಬಫರ್ ಜೋ ನ್‍ನಲ್ಲಿ ಇಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT