ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ | ಚಾಮುಂಡೇಶ್ವರಿ ದೇಗುಲದಲ್ಲಿ ಗಮನ ಸೆಳೆದ ನೋಟುಗಳ ಅಲಂಕಾರ

Published : 16 ಆಗಸ್ಟ್ 2024, 13:31 IST
Last Updated : 16 ಆಗಸ್ಟ್ 2024, 13:31 IST
ಫಾಲೋ ಮಾಡಿ
Comments

ಶ್ರೀರಂಗಪಟ್ಟಣ: ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪಟ್ಟಣದ ಚಾಮುಂಡೇಶ್ವರಿ ದೇವಾಲಯದ ಗರ್ಭಗುಡಿಯನ್ನು ₹ 10 ಲಕ್ಷ ಮೌಲ್ಯದ ನೋಟುಗಳಿಂದ ಅಲಂಕರಿಸಲಾಗಿತ್ತು.

ದೇವಿಯ ಪೀಠ, ಗರ್ಭಗುಡಿಯ ಎಡ ಬದಿ ಮತ್ತು ಬಲ ಬದಿಯಲ್ಲಿ ₹10, ₹20, ₹50, ₹100, ₹200 ಹಾಗೂ ₹500 ಮುಖ ಬೆಲೆಯ ನೋಟುಗಳು ರಾರಾಜಿಸಿದವು. ಸಂದೇಶ್ ಕಲಾವಿದ ಅವರ ನೇತೃತ್ವದ 10 ಜನರ ತಂಡ ಗುರುವಾರ ರಾತ್ರಿ 10 ಗಂಟೆಯಿಂದ ಶುಕ್ರವಾರ ಮುಂಜಾನೆ 6 ಗಂಟೆವರೆಗೂ ನೋಟುಗಳನ್ನು ಜೋಡಿಸಿತು.

ದೇವಾಲಯದಲ್ಲಿ ನಸುಕಿನಿಂದಲೇ ಪೂಜೆಗಳು ಆರಂಭವಾದವು. ಪ್ರಧಾನ ಅರ್ಚಕ ಕೆ.ಎಸ್‌. ಲಕ್ಷ್ಮೀಶ ಶರ್ಮಾ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಅರ್ಚನೆ, ಸಪ್ತಸತಿ ಪಾರಾಯಣ, ಲಕ್ಷ್ಮೀ ಸಹಸ್ರ ನಾಮ, ಮಹಾ ಮಂಗಳಾರತಿ ನಡೆಯಿತು. ಆಸುಪಾಸಿನ ಗ್ರಾಮಗಳ ಭಕ್ತರು ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT