ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ನರೇಂದ್ರಸ್ವಾಮಿ ಸಹಾಯ ಮರೆಯಲಾಗದು: ನಟ ದರ್ಶನ್

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ನಟ ದರ್ಶನ್ ಅಬ್ಬರದ ಪ್ರಚಾರ
Published 18 ಏಪ್ರಿಲ್ 2024, 16:17 IST
Last Updated 18 ಏಪ್ರಿಲ್ 2024, 16:17 IST
ಅಕ್ಷರ ಗಾತ್ರ

ಮಳವಳ್ಳಿ/ಬೆಳಕವಾಡಿ: ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಚಲನಚಿತ್ರ ನಟ ದರ್ಶನ್ ತಾಲ್ಲೂಕಿನ ವಿವಿಧೆಡೆ ಗುರುವಾರ ಪ್ರಚಾರ ನಡೆಸಿದರು.

ತಾಲ್ಲೂಕಿನ ಬೋಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಬೆಳಕವಾಡಿ, ಕಗ್ಗಲೀಪುರ, ಸರಗೂರು, ಪೂರಿಗಾಲಿ, ಕಿರುಗಾವಲು ಹೋಬಳಿಯ ಟಿ.ಕಾಗೇಪುರ, ತಳಗವಾದಿ, ದುಗ್ಗನಹಳ್ಳಿ, ಬಂಡೂರು, ಹಿಟ್ಟನಹಳ್ಳಿಕೊಪ್ಪಲು, ಮಿಕ್ಕೆರೆ, ಕಿರುಗಾವಲು, ಕಿರುಗಾವಲು ಸಂತೆಮಾಳದಲ್ಲಿ ಪ್ರಚಾರ ನಡೆಸಿದರು.

ಸಂಜೆ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಮತಯಾಚನೆ ಬಂದಾಗ ಅವರಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬೃಹತ್ ಹೂವಿನ ಹಾಕಿ ಅಭಿನಂದಿಸಿದರು.

ಅನಂತ್ ರಾಂ ವೃತ್ತದ ಬಳಿ ನಟ ದರ್ಶನ್ ಮಾತನಾಡಿ, ‘ಸಂಸದರಿಗೆ ವರ್ಷಕ್ಕೆ ಬರುವ ಅನುದಾನ ಕಡಿಮೆ, ನೀವು ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರನ್ನು ಗೆಲ್ಲಿಸಿದರೆ, ಮತ್ತಷ್ಟು ಹಣ ಹಾಕಿ ಜಿಲ್ಲೆಯ ಅಭಿವೃದ್ಧಿಗೆ ಮಾಡಲಿದ್ದಾರೆ. ನೀವು ಮಾಡಿರುವ ಸಹಾಯದ ಋಣ ತೀರಿಸಲು ಹತ್ತು ವರ್ಷವಾದರೂ ಸಾಲದು, ಅಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ನಮ್ಮ ಜೊತೆ ನಿಂತು ಅವರು ಮಾಡಿರುವ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಎನ್ನುವ ಮೂಲಕ 2019ರ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರ ಪರವಾಗಿ ಚುನಾವಣೆ ಮಾಡಿದ್ದ ನರೇಂದ್ರಸ್ವಾಮಿ ಸಹಾಯವನ್ನು’ ನೆನಪಿಸಿಕೊಂಡರು.

ಹಿಟ್ಟನಹಳ್ಳಿಕೊಪ್ಪಲಿಗೆ ಬಂದ ವೇಳೆ ಮಳೆ ಸಿಂಚನವನ್ನು ನೋಡಿದ ದರ್ಶನ್ ಅವರು ಮಳೆಯಾಗುತ್ತಿದ್ದು, ದನಕರುಗಳಿಗೆ ಮೇವಿನ ಬಿತ್ತನೆ ಮಾಡುವಂತೆ ಸಲಹೆ ನೀಡಿದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ‘ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಹಿಂದೆ ನಿಂತು ಕೆಲಸ ಮಾಡಿದ್ದವು. ಆದರೆ, ದರ್ಶನ್ ಹಗಲು ರಾತ್ರಿ ಎನ್ನದೇ ಪ್ರಚಾರ ಮಾಡಿ ಸುಮಲತಾ ಅವರನ್ನು ಗೆಲ್ಲಿಸಿದ್ದರು. ಕಳೆದ 10 ತಿಂಗಳ ಅವಧಿಯಲ್ಲಿ ಸುಮಾರು 500 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿರುವೆ. ಕಾಂಗ್ರೆಸ್ ಸರ್ಕಾರ ಮಂಡ್ಯ ಜಿಲ್ಲೆಗೆ ಶಾಶ್ವತ ಕೊಡುಗೆಗಳನ್ನು ನೀಡಿದ್ದಾರೆ’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ‘ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹತ್ತು ವರ್ಷಗಳ ಅಭಿವೃದ್ಧಿ ಬಗ್ಗೆ ಒಂದೇ ಒಂದು ಮಾತನಾಡಿಲ್ಲ, ಬದಲಾಗಿ ಸುಳ್ಳು ಭರವಸೆಗಳನ್ನು ನೀಡಿ ಮತ ಕೇಳಿ ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈಬಲಪಡಿಸಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಮಾತನಾಡಿ, ‘ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತನಾಡುತ್ತಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು. ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಉದ್ಯಮಿಯಾಗಿರುವ ವೆಂಟಕರಮಣೇಗೌಡ ಅವರು ಶಾಂತ ಸ್ವಭಾವದವರು ಅವರಿಂದ ಜಿಲ್ಲೆಯ ಯುವಕರಿಗೆ ಉದ್ಯೋಗ ದೊರೆಯಲಿದೆ’ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ‘ನಟ ದರ್ಶನ್ ಅವರ ಪ್ರಚಾರದಿಂದ ನನಗೆ ಆನೆ ಬಲ ಬಂದತಾಗಿದೆ’ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ನಿಕಟಪೂರ್ವ ಅಧ್ಯಕ್ಷ ಕೆ.ಜೆ.ದೇವರಾಜು, ಮುಖಂಡರಾದ ಆರ್.ಎನ್.ವಿಶ್ವಾಸ್, ಮುಟ್ಟನಹಳ್ಳಿ ಅಂಬರೀಶ್, ಸುಜಾತಾ ಕೆ.ಎಂ.ಪುಟ್ಟು, ಸುಷ್ಮಾ ರಾಜು ಇದ್ದರು.

ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ನಟ ದರ್ಶನ್ ಮತಯಾಚಿಸಿದರು. ಬಿ.ಎಸ್.ಶಿವಣ್ಣ ಮರಿತಿಬ್ಬೇಗೌಡ ಪಿ.ಎಂ.ನರೇಂದ್ರಸ್ವಾಮಿ ಇದ್ದಾರೆ
ಮಳವಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ನಟ ದರ್ಶನ್ ಮತಯಾಚಿಸಿದರು. ಬಿ.ಎಸ್.ಶಿವಣ್ಣ ಮರಿತಿಬ್ಬೇಗೌಡ ಪಿ.ಎಂ.ನರೇಂದ್ರಸ್ವಾಮಿ ಇದ್ದಾರೆ

ಪ್ರಚಾರದ ಮುಖಾಮುಖಿಯಾದ ಶಾಸಕ– ಮಾಜಿ ಶಾಸಕ

ಪ್ರಚಾರದ ವೇಳೆ ತಾಲ್ಲೂಕಿನ ವಾಸುವಳ್ಳಿ ಗ್ರಾಮದಲ್ಲಿ ಹಾಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಮಾಜಿ ಶಾಸಕ ಕೆ.ಅನ್ನದಾನಿ ಮುಖಾಮುಖಿಯಾದರು. ರೋಡ್ ಶೋ ನಡೆಸುತ್ತಿದ್ದ ಕೆ.ಅನ್ನದಾನಿ ಕುಮಾರಸ್ವಾಮಿ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಬೆಳಕವಾಡಿಯಲ್ಲಿ ಪ್ರಚಾರ ಮುಗಿಸಿ ಬರುತ್ತಿದ್ದ ಕೈ ಪ್ರಚಾರದ ವಾಹನ ಬಂದಾಗ ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ ಕುಮಾರಸ್ವಾಮಿ ಗೆಲ್ಲಿಸುವಂತೆ ಅನ್ನದಾನಿ ಮನವಿ ಮಾಡಿದರು. ಅನ್ನದಾನಿ ಮನವಿಗೆ ಕೌಂಟರ್ ಕೊಟ್ಟ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸುಳ್ಳು ಹೇಳುವ ಪಕ್ಷಕ್ಕೆ ವೋಟ್ ಹಾಕಬೇಡಿ ಎಂದು ಟಕ್ಕರ್ ನೀಡಿದರು.

ಮಳವಳ್ಳಿ/ಬೆಳಕವಾಡಿ: ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪರ ಚಲನಚಿತ್ರ ನಟ ದರ್ಶನ್ ತಾಲ್ಲೂಕಿನ ವಿವಿಧೆಡೆ ಗುರುವಾರ ಪ್ರಚಾರ ನಡೆಸಿದರು. ತಾಲ್ಲೂಕಿನ ಬೋಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಬೆಳಕವಾಡಿ ಕಗ್ಗಲೀಪುರ ಬಿಜಿಪುರ ಸರಗೂರು ಪೂರಿಗಾಲಿ ಕಿರುಗಾವಲು ಹೋಬಳಿಯ ಟಿ.ಕಾಗೇಪುರ ತಳಗವಾದಿ ದುಗ್ಗನಹಳ್ಳಿ ಬಂಡೂರು ಹಿಟ್ಟನಹಳ್ಳಿಕೊಪ್ಪಲು ಮಿಕ್ಕೆರೆ ಕಿರುಗಾವಲು ಕಿರುಗಾವಲು ಸಂತೆಮಾಳ ಹಾಗೂ ಮಳವಳ್ಳಿ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಪರ ಮತಯಾಚನೆ ಮಾಡಿದ ಅವರಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಬೃಹತ್ ಹೂವಿನ ಹಾಕಿ ಅಭಿನಂದಿಸಿದರು. ಅನಂತ್ ರಾಂ ವೃತ್ತದ ಬಳಿ ನಟ ದರ್ಶನ್ ಮಾತನಾಡಿ ಸಂಸದರಿಗೆ ವರ್ಷಕ್ಕೆ ಬರುವ ಅನುದಾನ ಕಡಿಮೆ ನೀವು ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಅವರನ್ನು ಗೆಲ್ಲಿಸಿದರೆ ಮತ್ತಷ್ಟು ಹಣ ಹಾಕಿ ಜಿಲ್ಲೆಯ ಅಭಿವೃದ್ಧಿಗೆ ಮಾಡಲಿದ್ದಾರೆ. ಈಗಾಗಲೇ ತಮ್ಮ ಉದ್ಯಮದಲ್ಲಿ ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಹೀಗಾಗಿ ಎಲ್ಲರೂ ಅವರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಕಳೆದ ಐದು ವರ್ಷಗಳ ಹಿಂದೆ ನೀವು ಮಾಡಿರುವ ಸಹಾಯದ ಋಣ ತೀರಿಸಲು ಹತ್ತು ವರ್ಷವಾದರೂ ಸಾಲದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಂದು ನಮ್ಮ ಜೊತೆ ನಿಂತು ಅವರು ಮಾಡಿರುವ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ ಅವರು ಕರೆದರೆ ಎಲ್ಲಿಗೆ ಬಂದು ಬೇಕಾದರೂ ಪ್ರಚಾರ ಮಾಡುತ್ತೇನೆ ಎನ್ನುವ ಮೂಲಕ 2019ರ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರ ಪರವಾಗಿ ಚುನಾವಣೆ ಮಾಡಿದ್ದ ಪಿ.ಎಂ.ನರೇಂದ್ರಸ್ವಾಮಿ ಅವರ ಸಹಾಯವನ್ನು ನೆನಪಿಸಿಕೊಂಡರು. ಹಿಟ್ಟನಹಳ್ಳಿಕೊಪ್ಪಲಿಗೆ ಆಗಮಿಸಿದ ವೇಳೆ ಮಳೆ ಸಿಂಚನವನ್ನು ನೋಡಿದ ದರ್ಶನ್ ಪ್ರತಿಯೊಂದು ಗ್ರಾಮಗಳಲ್ಲಿಯೂ ತೋರುತ್ತಿರುವ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿರುತ್ತೇನೆ. ಮಳೆಯಾಗುತ್ತಿದ್ದು ಧನಕರುಗಳಿಗೆ ಮೇವಿನ ಬಿತ್ತನೆ ಮಾಡುವಂತೆ ಸಲಹೆ ನೀಡಿದ ಅವರು ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಕೆ.ಎಂ.ಉದಯ್ ಕೈ ಬಲಪಡಿಸುವಂತೆ ಮನವಿ ಮಾಡಿದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಹಿಂದೆ ನಿಂತು ಕೆಲಸ ಮಾಡಿದ್ದವು. ಆದರೆ ದರ್ಶನ್ ಹಗಲು ರಾತ್ರಿ ಎನ್ನದೇ ಪ್ರಚಾರ ಮಾಡಿ ಸುಮಲತಾ ಅವರನ್ನು ಗೆಲ್ಲಿಸಿದ್ದರು. ಕಳೆದ 10 ತಿಂಗಳ ಅವಧಿಯಲ್ಲಿ ಸುಮಾರು 500 ಕೋಟಿಗೂ ಹೆಚ್ಚು ಅನುದಾನವನ್ನು ತಂದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿರುವೆ. ಕಾಂಗ್ರೆಸ್ ಸರ್ಕಾರ ಮಂಡ್ಯ ಜಿಲ್ಲೆಗೆ ಶಾಶ್ವತ ಕೊಡುಗೆಗಳನ್ನು ನೀಡಿದ್ದಾರೆ ಜೊತೆಗೆ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ವೆಂಟಕರಮಣೇಗೌಡ ಅವರು ದೊಡ್ಡ ಉದ್ಯಮಿಯಾಗಿದ್ದು ಈಗಾಗಲೇ ಐದು ಸಾವಿರಕ್ಕೂ ಅಧಿಕ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಸೇವೆ ಮಾಡುವ ಹಂಬಲದೊಂದಿಗೆ ರಾಜಕಾರಣಕ್ಕೆ ಬಂದಿರುವ ಅವರನ್ನು ಬೆಂಬಲಿಸುವಂತೆ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹತ್ತು ವರ್ಷಗಳ ಅಭಿವೃದ್ಧಿ ಬಗ್ಗೆ ಒಂದೇ ಒಂದು ಮಾತನಾಡಿಲ್ಲ ಬದಲಾಗಿ ಸುಳ್ಳು ಭರವಸೆಗಳನ್ನು ನೀಡಿ ಮತ ಕೇಳಿ ಹೋಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈಬಲಪಡಿಸಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಮಾತನಾಡಿ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತನಾಡುತ್ತಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು. ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಉದ್ಯಮಿಯಾಗಿರುವ ವೆಂಟಕರಮಣೇಗೌಡ ಅವರು ಶಾಂತ ಸ್ವಭಾವದವರು ಅವರಿಂದ ಜಿಲ್ಲೆಯ ಯುವಕರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಮಾತನಾಡಿ ನಟ ದರ್ಶನ್ ಅವರ ಪ್ರಚಾರದಿಂದ ನನಗೆ ಆನೆ ಬಲ ಬಂದತಾಗಿದೆ ಎಂದು ಹೇಳಿದರು. ಬಾಕ್ಸ್: ಪ್ರಚಾರದ ವೇಳೆ ತಾಲ್ಲೂಕಿನ ವಾಸುವಳ್ಳಿ ಗ್ರಾಮದಲ್ಲಿ ಹಾಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಮಾಜಿ ಶಾಸಕ ಕೆ.ಅನ್ನದಾನಿ ಎದುರು ಬದರಾದ ಘಟನೆ ನಡೆಯಿತು. ರೋಡ್ ಶೋ ನಡೆಸುತ್ತಿದ್ದ ಕೆ.ಅನ್ನದಾನಿ ವಾಸುವಳ್ಳಿ ಗ್ರಾಮದಲ್ಲಿ ಕುಮಾರಸ್ವಾಮಿ ಪರ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಬೆಳಕವಾಡಿಯಲ್ಲಿ ಪ್ರಚಾರ ಮುಗಿಸಿ ಬರುತ್ತಿದ್ದ ಕೈ ಪ್ರಚಾರದ ವಾಹನ ಗಮಿಸಿದ ಕಾವೇರಿ ಸಮಸ್ಯೆ ಇತ್ಯರ್ಥಕ್ಕೆ ಕುಮಾರಸ್ವಾಮಿ ಗೆಲ್ಲಿಸುವಂತೆ ಅನ್ನದಾನಿ ಮನವಿ ಮಾಡಿದರು. ಅನ್ನದಾನಿ ಮನವಿಗೆ ಕೌಂಟರ್ ಕೊಟ್ಟ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸುಳ್ಳು ಹೇಳುವ ಪಕ್ಷಕ್ಕೆ ವೋಟ್ ಹಾಕಬೇಡಿ ಎಂದು ಟಕ್ಕರ್ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ ಸಿ.ಪಿ.ರಾಜು ನಿಕಟಪೂರ್ವ ಅಧ್ಯಕ್ಷ ಕೆ.ಜೆ.ದೇವರಾಜು ಮುಖಂಡರಾದ ಆರ್.ಎನ್.ವಿಶ್ವಾಸ್ ಮುಟ್ಟನಹಳ್ಳಿ ಅಂಬರೀಶ್ ಸುಜಾತಾ ಕೆ.ಎಂ.ಪುಟ್ಟು ಸುಷ್ಮಾ ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT